ಚೀನಾದ ಜನನಿಬಿಡ ರಸ್ತೆ ಮೇಲೆ ಬೆಂಕಿ ಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

china-light-strikes
ಬೀಜಿಂಗ್, ಮೇ 16-ಬೆಂಕಿಯ ಉಂಡೆಗಳು ಭೂಮಿಯ ಮೇಲೆ ಅಪ್ಪಳಿಸುವ ಭಯಾನಕ ದೃಶ್ಯಗಳನ್ನು ನೀವು ಹಾಲಿವುಡ್ ಸಿನಿಮಾಗಳಲ್ಲಿ ನೋಡಿರುತ್ತೀರಿ. ಇಂಥದೊಂದು ಭಯಂಕರ ಅನುಭವ ಚೀನಾದ ಜನನಿಬಿಡ ರಸ್ತೆಯಲ್ಲಿ ವಾಹನ ಪ್ರಯಾಣಿಕರಿಗೆ ಆಗಿದೆ. ರಸ್ತೆ ಮೇಲೆ ಬೆಂಕಿ ಉಂಡೆಗಳು ಅಪ್ಪಳಿಸಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   ಭಾರೀ-ಗುಡುಗು ಮಿಂಚಿನ ನಂತರ ಬೆಂಕಿಯ ಮಳೆ ಆಕಾಶದಿಂದ ಸುರಿದ ದೃಶ್ಯವನ್ನು 8 ಸೆಕೆಂಡ್‍ಗಳ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.  ಚೀನಾದ ಲಿಯೋನಿಂಗ್ ಪ್ರಾಂತ್ಯದ ಶೆನ್ಯಾಂಗ್ ಎಂಬಲ್ಲಿ ಈ ಘಟನೆ ನಡೆದಿದೆ. ಭಾರೀ ಮಿಂಚು ಅಪ್ಪಳಿಸಿದ ನಂತರ ಕ್ಷಣಕಾಲ ಕತ್ತಲು ಆವರಿಸಿ ನಂತರ ದೊಡ್ಡ ಬೆಂಕಿ ಕಿಡಿಗಳು ವಾಹನಗಳ ಮೇಲೆ ಬಿದ್ದಿವೆ. ಈ ಸಂದರ್ಭದಲ್ಲಿ ಅನೇಕ ವಾಹನಗಳು ಇದೇ ಮಾರ್ಗದಲ್ಲಿ ಸಾಗುತ್ತಿದ್ದವು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin