ಜಾಧವ್ ಪರ ವಕಾಲತ್ತು ವಹಿಸಿದ ವಕೀಲ ಹರೀಶ್ ಸಾಳ್ವೆ ಸಂಭಾವನೆ ಎಷ್ಟು ಗೊತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Harish-salve

ನವದೆಹಲಿ, ಮೇ 16-ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆಯಿಂದ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾರು ಮಾಡಲು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿ ಪಾಕ್‍ಗೆ ಹಿನ್ನಡೆಯಾಗುವಂತೆ ಮಾಡಿರುವ ಭಾರತ ಖ್ಯಾತ ಹಿರಿಯ ವಕೀಲ ಹರೀಶ್ ಸಾಳ್ವೆ ಈ ಪ್ರಕರಣಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೆ ?   ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗಳಲ್ಲಿ ಪ್ರಕರಣದ ವಕಾಲತ್ತು ವಹಿಸಿ ಸಮರ್ಥ ವಾದ ಮಂಡಿಸಲು ಪ್ರಸಿದ್ಧ ವಕೀಲರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವಾಗ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರೀ ವಿವಾದ ಪ್ರಕರಣವನ್ನು ಪ್ರತಿನಿಧಿಸಲು ಸಾಳ್ವೆಗೆ ಕೇಂದ್ರ ಸರ್ಕಾರ ಕೋಟಿ ಕೋಟಿ ರೂ.ಗಳನ್ನು ಸಂಭಾವನೆಯಾಗಿ ಕೊಟ್ಟಿರುತ್ತದೆ ಎಂಬುದು ಎಲ್ಲರ ಲೆಕ್ಕಾಚಾರ. ಆದರೆ ಈ ಊಹೆ ತಪ್ಪು.


ಜಾಧವ್‍ರನ್ನು ನೇಣು ಕುಣಿಕೆಯಿಂದ ರಕ್ಷಿಸಲು ವಾದ ಮಂಡನೆಗಾಗಿ ಸಾಳ್ವೆ ಪಡೆದ ಸಂಭಾವನೆ ಕೇವಲ 1 ರೂಪಾಯಿ ಮಾತ್ರ..!!  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸ್ವತಃ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 61 ವರ್ಷದ ಸಾಳ್ವೆ ಸಮರ್ಥ ಹಿರಿಯ ವಕೀಲರಾಗಿದ್ದಾರೆ. ದೇಶ ಮತ್ತು ವಿದೇಶಗಳ ಕಾನೂನುಗಳಲ್ಲಿ ಅಪಾರ ಪರಿಣಿತಿ ಪಡೆದಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಕಾನೂನು ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ಸಮರ್ಥ ವಾದದಿಂದ ಈ ಪ್ರಕರಣದಲ್ಲಿ ಭಾರತಕ್ಕೆ ನ್ಯಾಯ ಲಭಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನೆದರ್‍ಲೆಂಡ್ಸ್‍ನ ಹೇಗ್‍ನ ಇಂಟರ್‍ನ್ಯಾಷನಲ್ ಕೋರ್ಟ್‍ನಲ್ಲಿ ವಿಚಾರಣೆ ವೇಳೆ ಭಾರತವನ್ನು ಪ್ರತಿನಿಧಿಸಿದ್ದ ಮಾಜಿ ಸಾಲಿಸಿಟರ್ ಜನರಲ್ ಸಾಳ್ವೆ 90 ನಿಮಿಷಗಳ ಕಾಲ ಭಾರತದ ಪರವಾಗಿ ಸಮರ್ಥ ವಾದ ಮಂಡಿಸಿದರು.
ಜಾಧವ್‍ಗೆ ಗಲ್ಲು ಶಿಕ್ಷೆ ವಿಧಿಸಿರುವುದು ವಿಯೆನ್ನಾ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ. ಪಾಕಿಸ್ತಾನ ಸೇನಾ ನ್ಯಾಯಾಲಯ ಏಕಪಕ್ಷೀಯ ತೀರ್ಪು ನೀಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಬ್ರಾಹಾಂ ನೇತೃತ್ವದ 11 ನ್ಯಾಯಮೂರ್ತಿಗಳ ಪೀಠದ ಮುಂದೆ ಬಲವಾಗಿ ವಾದಿಸಿ ಗಮನಸೆಳೆದಿದ್ದಾರೆ.   ಜಾಧವ್ ಅವರನ್ನು ಕಳೆದ ವರ್ಷ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಏಜೆಂಟ್‍ಗಳು ಇರಾನಿನಿಂದ ಅಪಹರಿಸಿ, ಪಾಕ್‍ಗೆ ಕರೆದೊಯ್ದಿದ್ದರು. ನಂತರ ಅವರ ಮೇಲೆ ಗೂಢಚಾರಿಕೆ ಆರೋಪ ಹೊರಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin