2,200 ಕೋಟಿ ರೂ.ಗಳ ಬೃಹತ್ ಮೊತ್ತದ ವಿದೇಶಿ ಪಾವತಿ ಹಗರಣ ಭೇದಿಸಿದ ಸಿಬಿಐ

ಈ ಸುದ್ದಿಯನ್ನು ಶೇರ್ ಮಾಡಿ

cbi

ನವದೆಹಲಿ, ಮೇ 16-ಸುಮಾರು 2,200 ಕೋಟಿ ರೂ.ಗಳ ಮೊತ್ತದ ಬೃಹತ್ ವಿದೇಶಿ ಪಾವತಿ ಹಗರಣವನ್ನು ಸಿಬಿಐ ಭೇದಿಸಿದೆ.
2015-16ನೇ ಸಾಲಿನಲ್ಲಿ 13 ಕಂಪನಿಗಳು ಕೇವಲ 24.64 ಕೋಟಿ ರೂ. ಮೌಲ್ಯದ ಆಮದು ವಹಿವಾಟಿಗೆ 2,200 ಕೋಟಿ ರೂ.ಗಳನ್ನು ವಿದೇಶಿ ಸಂಸ್ಥೆಗಳಿಗೆ ಪಾವತಿಸುವ ಮೂಲಕ ಭಾರೀ ಅಕ್ರಮ-ಅವ್ಯಹಾರ ನಡೆಸಿರುವುದು ಬೆಳಕಿಗೆ ಬಂದಿದೆ.  ಆಮದು ಮೌಲ್ಯಕ್ಕಿಂತ ಹಲವು ಪಟ್ಟು ಅಧಿಕ ಮೊತ್ತ ಪಾವತಿಸಿ ದೊಡ್ಡ ವಂಚನೆ ಎಸಗಿರುವ ಸ್ಟೆಲ್‍ಕೋನ್ ಇನ್‍ಫ್ರಾಟೆಲ್ ಲಿಮಿಟೆಡ್ (ಎಸ್‍ಐಪಿಎಲ್) ವಿರುದ್ಧ ಕೇಂದ್ರೀಯ ತನಿಖಾ ದಳ ಪ್ರಕರಣ ದಾಖಲಿಸಿಕೊಂಡಿದೆ. ವಿದೇಶಿ ಸಂಸ್ಥೆಗಳಿಗೆ 2015-16ರ ಅವಧಿಯಲ್ಲಿ ದೊಡ್ಡ ಮೊತ್ತ ಪಾವತಿಸಿದ್ದು, ಇವುಗಳಲ್ಲಿ ಹಲವು ಹಣ ವರ್ಗಾವಣೆ ವ್ಯವಹಾರಗಳು ಕಂಪನಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಖಾತೆಯಿಂದ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ಆರೋಪಿಸಿದ್ದಾರೆ.ಈ ಅವಧಿಯಲ್ಲಿ ಒಟ್ಟಾರೆ ಎಸ್‍ಐಪಿಎಲ್ ಆಮದು ವ್ಯವಹಾರಕ್ಕಾಗಿ ತನ್ನ ಆರು ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು 680.12 ಕೋಟಿ ರೂ.ಗಳನ್ನು ಪಾವತಿಸಿತ್ತು. ಆದರೆ ವಾಸ್ತವಿಕವಾಗಿ ಈ ಅವಧಿಯಲ್ಲಿ ಕಂಪನಿಯು ಸೀಮಾ ಸುಂಕ ಸೇರಿ 3.14 ಕೋಟಿ ರೂ.ಮೌಲ್ಯದ ಸರಕುಗಳನ್ನು ಮಾತ್ರ ಆಮದು ಮಾಡಿಕೊಂಡಿತ್ತು ಎಂದು ಸಿಬಿಐ ಆಪಾದಿಸಿದೆ.  ವಿದೇಶಿ ಕಂಪನಿಗಳಿಗೆ ಹೆಚ್ಚುವರಿಯಾಗಿ 678.98 ಕೋಟಿ ರೂ.ಗಳನ್ನು ಸಂಸ್ಥೆ ಅಕ್ರಮವಾಗಿ ರವಾನಿಸಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಇತರ 12 ಕಂಪನಿಗಳೂ ಕೂಡ 1,572 ಕೋಟಿ ರೂ. ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಎಫ್‍ಐಆರ್‍ನಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin