69 ಅಡಿಗೆ ಕುಸಿದ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

KRS
ಮೈಸೂರು, ಮೇ 16-ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ 69 ಅಡಿಗೆ ಕುಸಿದಿದೆ.  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ಮಟ್ಟ 69.6 ಅಡಿಗೆ ಕುಸಿದಿದೆ.  ಸದ್ಯ ಜಲಾಶಯದಲ್ಲಿ 6.90 ಟಿಎಂಸಿ ನೀರಿನ ಸಂಗ್ರಹವಿದೆ. ಒಳ ಹರಿವು 1.91 ಕ್ಯೂಸೆಕ್, ಹೊರ ಹರಿವು 8.64 ಕ್ಯೂಸೆಕ್ ಇದೆ.  ಮೇ 15ರ ನಂತರ ಬೇಸಿಗೆ ಮಳೆ ಸಂದರ್ಭದಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಬೇಕಾಗಿತ್ತು. ಆದರೆ ಮಳೆಯ ಕೊರತೆಯಿಂದ ಜಲಾಶಯದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.ಹಾಲಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಜೂ.13ರವರೆಗೆ ಕುಡಿಯಲು ಬಳಕೆಗೆ ಮಾತ್ರ ಸಾಧ್ಯವಾಗುತ್ತದೆ. ಅಷ್ಟರೊಳಗೆ ನದಿ ಪಾತ್ರದಲ್ಲಿ ಮಳೆ ಬಂದು ಜಲಾಶಯದಲ್ಲಿ ನೀರು ಸಂಗ್ರಹವಾಗಬೇಕು. ಇಲ್ಲದಿದ್ದರೆ ಡೆಡ್‍ಸ್ಟೋರೇಜ್ ತಲುಪಿ ಜಲಾಶಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಈಗಾಗಲೇ ಮುಂಗಾರು ಮಳೆ ಮುನ್ಸೂಚನೆ ಪ್ರಾರಂಭವಾಗಿದೆ. ಬೇಸಿಗೆ ಮಳೆ ಅಲ್ಲಲ್ಲಿ ಬೀಳತೊಡಗಿದೆ. ಕೊಡಗು, ಭಾಗಮಂಡಲ ಪ್ರದೇಶದಲ್ಲಿ ಮಳೆಯಾದರೆ ಕೆಆರ್‍ಎಸ್‍ಗೆ ನೀರು ಹರಿದು ಬರುತ್ತದೆ. ತಿಂಗಳ ಅಂತ್ಯದಲ್ಲಿ ಮತ್ತು ಜೂನ್ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕೆಆರ್‍ಎಸ್‍ಗೆ ಒಳಹರಿವು ಹೆಚ್ಚಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin