ಅಮೆರಿಕದಲ್ಲಿ ಭಾರತೀಯ ಮೂಲದ ಯುವಕ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

missing

ನ್ಯೂಯಾರ್ಕ್, ಮೇ 17-ಭಾರತೀಯ ಮೂಲದ ಅಮೆರಿಕದ ಯುವನ ಬೋಸ್ಟಾನ್‍ನಲ್ಲಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾನೆ. ಈ ಕಣ್ಮರೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.  ಬೋಸ್ಟಾನ್‍ನ ರಸ್ತೆಯೊಂದರಲ್ಲಿ ತನ್ನ ಕಾರನ್ನು ನಿಲ್ಲಿಸಿದ್ದ ಲೆಕ್ಸಿಂಗ್ಟನ್‍ನ ರಾಮ್ ಜಯಕುಮಾರ್ (26) ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾನೆ. ತಮ್ಮ ಪುತ್ರ ಕಣ್ಮರೆಯಾಗಿರುವ ಬಗ್ಗೆ ರಾಮ್‍ನ ಪೋಷಕರು ಲೆಕ್ಸಿಂಗ್ಟನ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಪ್ಪು ಕೂದಲು, 5.6 ಅಡಿ ಎತ್ತರ, ಮತ್ತು 54 ಕೆಜಿ ಇದ್ದಾನೆ ಎಂದು ಚಹರೆ ಬಗ್ಗೆ ಮಾಹಿತಿ ನೀಡಲಾಗಿದೆ.



ಇನ್ನೊಂದು ಗಂಟೆಯೊಳಗೆ ಹಿಂದಿರುಗುವುದಾಗಿ ಮನೆಯಿಂದ ಹೊರಹೋಗಿದ್ದ ರಾಮ್ ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ. ಚಾಲ್ರ್ಸ್ ನದಿ ಬಳಿ ಬೋಸ್ಟಾನ್ ರಸ್ತೆಯೊಂದರಲ್ಲಿ ±ನಿವಾರ ಬೆಳಿಗ್ಗೆ ಅವರ ವಾಹನ ಪತ್ತೆಯಾಗಿದೆ.  ಈ ಕುರಿತು ಅಮೆರಿಕನ್ನರಲ್ಲಿ ಮನವಿ ಮಾಡಿರುವ ಭಾರತೀಯ ಮೂಲದ ಅಮೆರಿಕ ನಟಿ ಪೂರ್ಣ ಜಗನ್ನಾಥನ್, ರಾಮ್ ನನ್ನ ಸೋದರ ಸಂಬಂಧಿ. ಆತನ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಿ ಎಂದು ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin