ಎಚ್.ಡಿ.ದೇವೇಗೌಡರ 85ನೆ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Devegowda-nJDS---01

ಕೋಲಾರ, ಮೇ 17- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 85ನೆ ಹುಟ್ಟು ಹಬ್ಬವನ್ನು ಸಾರ್ಥಕ ರೀತಿಯಲ್ಲಿ ಆಚರಿಸಲಾಗುವುದು ಎಂದು ಜೆ.ಪಿ. ವಿಚಾರ ವೇದಿಕೆ ಸಂಚಾಲಕ ದಯಾನಂದ ತಿಳಿಸಿದರು.ಪತ್ರಿಕೆಯೊಂದಿಗೆ ಮಾತನಾಡಿದ ಅವರು , 1933ರಲ್ಲಿ ಕುಗ್ರಾಮದಲ್ಲಿ ಜನಿಸಿ ತಮ್ಮ ಪರಿಶ್ರಮ ನಿಷ್ಠೆಯಿಂದ ಜನಸೇವೆ ಮಾಡಿ ರಾಷ್ಟ್ರದ ಪ್ರಧಾನಿ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ದೇವೇಗೌಡರ 85 ನೆ ಹುಟ್ಟುಹಬ್ಬವನ್ನು ನಾಳೆ (ಮೇ 18) ನಗರದ ಚನ್ನಯ್ಯ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದರು.
ದೇವೇಗೌಡರ ಒಡನಾಡಿಗಳಾದ ಮಾಜಿ ಸಚಿವ ನಾಣಯ್ಯ ಮತ್ತು ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ದೇವೇಗೌಡರು ನಡೆದು ಬಂದ ದಾರಿಯನ್ನು ತಿಳಿಸಲಿದ್ದಾರೆ.ದೇವೇಗೌಡರಿಂದ ಪ್ರೇರಣೆಗೊಂಡು ರಾಜಕೀಯ ಪ್ರವೇಶ ಮಾಡಿ ಶಾಸಕರಾಗಿರುವ ವೈ.ಎಸ್.ವಿ.ದತ್ತ ಅವರು ದೇವೇಗೌಡರಿಂದ ಯುವಕರಿಗಾಗಿರುವ ಸ್ಫೂರ್ತಿಯ ಬಗ್ಗೆ ಮಾತನಾಡಲಿದ್ದಾರೆ.ಇದೇ ಸಂದರ್ಭದಲ್ಲಿ ಸಮಾಜಕ್ಕೆ ಮತ್ತು ಪರಿಸರಕ್ಕೆ ದುಡಿದ 9 ಜನ ಸಾಧಕರನ್ನು ಸನ್ಮಾನಿಸಲಾಗುವುದು.
ಪರಿಸರವಾದಿ, ಪ್ರಾಣಿ ಪಕ್ಷಿಗಳ ಅನುಕೂಲಕ್ಕಾಗಿ 8 ಸಾವಿರ ಮಾವಿನ ಗಿಡಗಳನ್ನು ನೆಟ್ಟಿರುವ ರಾಮಪುರದ ಅಶೋಕ. ಸಾವಯವ ಕೃಷಿ ಬೀಜಬ್ಯಾಂಕ್ ಮಾಡಿರುವ ಪಾಪಮ್ಮ. ಕಾಡನ್ನೇ ಸೃಷ್ಟಿ ಮಾಡಬೇಕೆಂದು ಪಣತೊಟ್ಟು 10 ಲಕ್ಷ ಬೀಜದ ಚೆಂಡುಗಳನ್ನು ನಿರ್ಮಿಸಿರುವ ಶಿಡ್ಲಘಟ್ಟದ ರಾಜೀವ್‍ಗೌಡ, ಪರಿಸರವಾದಿ, ಪ್ರಾಣಿ ಪ್ರೇಮಿ, ಕ್ರೀಡಾ ಪ್ರೇಮಿಯಾಗಿರುವ ಕೋಲಾರದ ತ್ಯಾಗರಾಜ್, ಓದು-ಬರಹ ಬಾರದಿದ್ದರೂ, ಕಂಪ್ಯೂಟರ್ ಶಿಕ್ಷಣ ಪಡೆದು ದೇವರಾಯ ಸಮುದ್ರ ಗ್ರಾ.ಪಂ.ನ ಎಲ್ಲಾ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಿ, ರಾಷ್ಟ್ರದ ಮಾಜಿ ಪ್ರಧಾನಿ ಮನಮೋಹನ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.
ಜನರಿಂದಲೇ ಅಡವಿ ಕಾವಲಿ ಎಂದು ಬಿರುದು ಪಡೆದಿರುವ ಪಾಪಣ್ಣ ಕಾಡ್ಗಿಚ್ಚು ಹರಡದಂತೆ ನೋಡಿಕೊಳ್ಳುವುದು. ವಿಶೇಷ ರೀತಿಯ ಗಿಡಗಳು ಕಂಡರೆ ಅವುಗಳನ್ನು ವೃದ್ಧಿ ಮಾಡುವ ಸಲುವಾಗಿ ಗಿಡಗಳನ್ನು ಸಸಿಮಾಡಿ ಬೇರೆಡೆ ಬೆಳೆಸುವುದೇ ಇವರ ಕಾಯಕವಾಗಿದೆ.ಗಣಿತದಲ್ಲೇ ಸಾಧನೆ ಮಾಡುತ್ತಿರುವ ಕಸದಲ್ಲಿ ರಸ ಮಾಡುವ ಕೋಲಾರದ ಬ್ಯಾಂಕ್ ಉದ್ಯೋಗಿ ವಿ.ಎಸ್.ಎಸ್.ಶಾಸ್ತ್ರಿ ಪತ್ರಿಕೋದ್ಯಮದಲ್ಲಿ ವಿಶ್ವಕುಂದಾಪುರ ಸಾಲುಮರದ ತಿಮ್ಮಕ್ಕನಂತೆ ಮರಗಳನ್ನು ಬೆಳಸುವ ಶ್ರೀನಿವಾಸಪುರದ ರಾಜರೆಡ್ಡಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.ಕೋಲಾರ ಜೆಡಿಎಸ್ ವತಿಯಿಂದ ನಗರದ ಬುದ್ಧಿಮಾಂದ್ಯ ಅಂಗವಿಕಲರ ಶಾಲೆಯಲ್ಲಿ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ದೇವೇಗೌಡ ಹುಟ್ಟುಹಬ್ಬ ಆಚರಿಸಲಾಗುವುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin