ಐಪಿಎಲ್-10 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲಿಮಿನೇಟರ್‍ಗಳ ಕಾದಾಟ

ಈ ಸುದ್ದಿಯನ್ನು ಶೇರ್ ಮಾಡಿ

IPL
ಬೆಂಗಳೂರು, ಮೇ 17- ಐಪಿಎಲ್ 10 ರ ಕದನ ದಿನದಿಂದ ದಿನಕ್ಕೇ ರೋಚಕತೆ ಪಡೆಯುತ್ತಿದ್ದು ಇಂದು ಇಲ್ಲಿ ನಡೆಯಲಿರುವ ಎಲಿಮಿನೇಟರ್‍ಗಳ ಪಂದ್ಯವು ಕೂಡ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.  ಪ್ರಸಕ್ತ ಸಾಲಿನ ಐಪಿಎಲ್ ಚಾಂಪಿಯನ್ಸ್ ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ಎರಡು ಬಾರಿ ಐಪಿಎಲ್ ವಿಜೇತರಾದ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡಗಳು ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೆಣಸಲು ಅರ್ಹತೆ ಪಡೆಯಲು ಹಾತೊರೆಯುತ್ತಿದೆ.

 

ಎರಡು ತಂಡಗಳು ಬಲಿಷ್ಠ:
ಸನ್‍ರೈಸರ್ಸ್ ಹಾಗೂ ಕೋಲ್ಕತ್ತಾನೈಟ್ ರೈಡರ್ಸ್ ತಂಡಗಳಲ್ಲಿ ಹಿರಿಯ ಹಾಗೂ ಕಿರಿಯರ ಆಟಗಾರರ ದಂಡನ್ನೇ ಹೊಂದಿದ್ದು ಎರಡು ತಂಡವು ಸಮಬಲ ಹೋರಾಟವನ್ನೇ ಪ್ರದರ್ಶಿಸುತ್ತಿದೆ.  ಪ್ರಸಕ್ತ ಐಪಿಎಲ್‍ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಗೌತಮ್ ಗಂಭೀರ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 17 ರನ್‍ಗಳಿಂದ ಜಯ ಸಾಧಿಸಿದ್ದರೆ, ಏಪ್ರಿಲ್ 30ರಂದು ನಡೆದ ಪಂದ್ಯದಲ್ಲಿ ಸನ್‍ರೈಸರ್ಸ್ ತಂಡವು 48 ರನ್‍ಗಳಿಂದ ಸೋಲು ಕಂಡಿದೆ.


 

ಕೆಕೆಆರ್ ಫೇವರೇಟ್: 
ಆರ್‍ಸಿಬಿ ತಂಡವು ಇಂದಿನ ಎಲಿಮಿನೇಟರ್ ಪಂದ್ಯದಿಂದ ಹೊರ ಬಿದ್ದಿರುವುದರಿಂದ ಇಂದಿನ ಪಂದ್ಯದಲ್ಲಿ ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವೇ ಫೇವರೇಟ್ ತಂಡವೆಂದೆನಿಸಿದೆ.  ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ರಾಬಿನ್ ಉತ್ತಪ್ಪ ಅವರು ಸ್ಥಾನ ಪಡೆಯುವ ಮೂಲಕ ಇಂದಿನ ಪಂದ್ಯದಲ್ಲಿ ಬಲು ಆಕರ್ಷಣೀಯ ಆಟಗಾರರಿದ್ದಾರೆ. ಆದರೆ ಸನ್‍ರೈಸರ್ಸ್‍ನಲ್ಲೂ ಕೂಡ ಯುವರಾಜ್‍ಸಿಂಗ್, ಶಿಖರ್‍ಧವನ್, ಡೇವಿಡ್ ವಾರ್ನರ್ ಅಭಿಮಾನಿಗಳ ಫೇವರೇಟ್ ಆಟಗಾರರಾಗಿದ್ದಾರೆ.  ಅಲ್ಲದೆ ಟೂರ್ನಿಯುದ್ದಕ್ಕೂ ಹೊರಗುಳಿ ದಿರುವ ಕನ್ನಡಿಗ ಅಭಿಮನ್ಯು ಮಿಥುನ್‍ರನ್ನು ಟಾಪ್ 11ರಲ್ಲಿ ಸ್ಥಾನ ಪಡೆದರೆ ಪಂದ್ಯದ ರಂಗು ಮತ್ತಷ್ಟು ಹೇರುತ್ತದೆ.

 

ರನ್ ಚೇಸಿಂಗ್ ಸುಲಭ:
ಬ್ಯಾಟಿಂಗ್‍ಗೆ ಹೆಚ್ಚು ಪ್ರಶಸ್ತ ಎನಿಸಿಕೊಂಡಿ ರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಕೂಡ ಮಹತ್ತರ ಪಾತ್ರ ವಹಿಸಲಿದ್ದು ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರೆ ಪಂದ್ಯವನ್ನು ಗೆದ್ದಂತೆಯೇ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin