ಕಾಫಿ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎಂ.ಎಸ್.ಬೋಜೇಗೌಡ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

coffe-board

ಬೆಂಗಳೂರು, ಮೇ 17-ಕಾಫಿ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎಂ.ಎಸ್.ಬೋಜೇಗೌಡ ಅವರು ಇಂದು ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಕಾಫಿಪುಡಿಯ ಸ್ವಾದಕ್ಕೆ ಬೆರೆಸುವ ಚಿಕೋರಿ ಬಗ್ಗೆ ಗೊಂದಲವಿದೆ. ಇದು ಆರೋಗ್ಯಕ್ಕೆ ಪೂರಕ-ಮಾರಕ ಎಂಬ ಬಗ್ಗೆ ಗೊಂದಲವಿದೆ. ಇದನ್ನು ಪರಿಹರಿಸಬೇಕು ಎಂದರು.  ಕಾಫಿ ಬೆಳೆಗಾರರಿಂದ ಗ್ರಾಹಕರ ಬಳಿ ತಲುಪ ವೇಳೆಗೆ ಕಲಬೆರಕೆಯಾಗಿರುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಬೇಕಾದ ಅಗತ್ಯವಿದೆ. ಕಾಫಿ ಬೆಳೆಗಾರರಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಬೇಕಾಗಿದೆ. ಈ ಬಗ್ಗೆ ಪ್ರಯತ್ನ ನಡೆಸುವುದಾಗಿ ಬೋಜೇಗೌಡ ಹೇಳಿದರು.



ಜಮ್ಮು-ಕಾಶ್ಮೀರದ ಸೈನಿಕರು ಕೂಡ ಕಾಫಿ ಕುಡಿಯುವಂತಾಗ ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಫಿ ತಲುಪಬೇಕು ಎಂದು ಅವರು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಅಧಿಕಾರೇತರು ಮತ್ತು ಕಾಫಿ ಬೆಳೆಗಾರರೊಬ್ಬರು ಕಾಫಿ ಮಂಡಳಿಗೆ ಅಧ್ಯಕ್ಷರಾಗಿರುವುದು ಸೂಕ್ತವಾಗಿದೆ. ಇವರಿಗೆ ಕಾಫಿ ಬೆಳೆಗಾರರ ಸಮಸ್ಯೆಗಳ ಅರಿವಿರುತ್ತದೆ ಎಂದು ಹೇಳಿದರು.  ಕಾಫಿ ಮಂಡಳಿ ಕಾರ್ಯ ದರ್ಶಿ ಶ್ರೀವತ್ಸ ಕೃಷ್ಣ, ಶಾಸಕ ಸಿ.ಟಿ.ರವಿ, ಬಿ.ಎಲ್.ಶಂಕರ್, ವಾಮ ನಾಚಾರ್ಯ, ಅಶ್ವತ್ಥನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin