ಕಾಶ್ಮೀರ ಗಡಿಯಲ್ಲಿ ಮತ್ತೆ ಮುಂದುವರೆದ ಪಾಕ್ ಗುಂಡಿನ ದಾಳಿ, 1,700 ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Pak-Attack
ಜಮ್ಮು, ಮೇ 17-ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಪಾಕಿಸ್ತಾನಿ ಸೈನಿಕರ ಪುಂಡಾಟ ಎಂಟನೆ ದಿನವಾದ ಇಂದೂ ಕೂಡ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಬಾಲ್‍ಕೋಟ್ ವಲಯದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಪಾಕ್ ರೇಂಜರ್‍ಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ಮುಂಜಾನೆ ಅಪ್ರಚೋದಿತ ದಾಳಿ ನಡೆಸಿದ್ದಾರೆ. ಭಾರತೀಯ ಸೇನಾ ನೆಲೆ ಮತ್ತು ಗಡಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಭಾರೀ ಷೆಲ್ ದಾಳಿಗಳನ್ನು ಮುಂದುವರಿಸಿವೆ.


 

ಇದಕ್ಕೆ ಭಾರತದ ಯೋಧರೂ ದಿಟ್ಟ ಉತ್ತರ ನೀಡಿದ್ದಾರೆ.  ಈ ಅಪ್ರಚೋದಿತ ದಾಳಿಯಲ್ಲಿ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 1,700ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಪೂಂಚ್ ಸೇರಿದಂತೆ ಇನ್ನೂ ಕೆಲವು ಸ್ಥಳಗಳಲ್ಲೂ ಯುದ್ಧವಿರಾಮ ಉಲ್ಲಂಘನೆ ವರದಿಯಾಗಿವೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.  ಕಳೆದ ಎಂಟು ದಿನಗಳ ಅವಧಿಯಲ್ಲಿ ಪಾಕಿಸ್ತಾನ ಹತ್ತು ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಯೋಧರೂ ಪ್ರತಿರೋಧ ದಾಳಿ ನಡೆಸಿದ್ದು ಗುಂಡಿನ ಚಕಮಕಿ ನಡೆದಿದೆ.

ಗಡಿಯಲ್ಲಿನ ಕೆಲವು ಗ್ರಾಮಗಳಿಂದ 300ಕ್ಕೂ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಪರಿಹಾರ ಶಿಬಿರಗಳಲ್ಲಿ 1,700ಕ್ಕೂ ಹೆಚ್ಚು ಗ್ರಾಮಸ್ಥರು ಆಶ್ರಯ ಪಡೆಯುತ್ತಿದ್ದಾರೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.  ರಜೌರಿಯಲ್ಲಿ ಮೇ ಕಳೆದ ಮೂರು ದಿನಗಳ ಹಿಂದೆ ಪಾಕಿಸ್ತಾನ ಯೋಧರು ನಡೆಸಿದ ದಾಳಿಯಿಂದ ಮೂರು ಗ್ರಾಮಗಳಿಂದ 1,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin