ನಂಜನಗೂಡಿನಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಮೇ 17- ಯುವ ಶಕ್ತಿಯನ್ನು ಪಕ್ಷದತ್ತ ಸೆಳೆದು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಜಿಲ್ಲಾಪ್ರಧಾನ ಕಾರ್ಯದರ್ಶಿ, ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.ನಂಜನಗೂಡು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 5 ಜನ ಸ್ಪರ್ಧೆಯಲ್ಲಿದ್ದು ಹೌಸಿಂಗ್ ಬೋರ್ಡ್‍ನ ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ ಪುತ್ರ ಮೊಹಮದ್ ನಿಜಾಮುದ್ದೀನ್ ಸರಸ್ವತಿ ಕಾಲೋನಿ, ಅಯೂಬ್ ಖಾನ್, ಅಶೋಕಪುರಂ ಮೋಹಿನ್ ಖಾನ್ ಶ್ರೀರಾಂಪುರ ನಿವಾಸಿ ಪ್ರದೀಪ್ ಕುಮಾರ್, ಪುರಸಬಾ ಮಾಜಿ ಉಪಾಧ್ಯಕ್ಷ ಇಂದ್ರ ರವರ ಪುತ್ರ ಚಂದ್ರು ಸೇರಿದಂತೆ ಐವರು ಸ್ಪರ್ಧೆಯಲ್ಲಿದ್ದು ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ ಪುತ್ರ ಮೊಹಮದ್ ನಿಜಾಮುದ್ದೀನ್, ಹಾಗೂ ಪುರಸಬಾ ಮಾಜಿ ಉಪಾಧ್ಯಕ್ಷ ಇಂದ್ರ ರವರ ಪುತ್ರ ಚಂದ್ರು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಯುವ ಕಾಂಗ್ರೆಸ್ ಸದಸ್ಯರ ನೇಮಕಾತಿಯನ್ನು ಮಾಡಿಕೊಳ್ಳಲಾಗಿತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ 2375 ಯುವ ಕಾಂಗ್ರೇಸ್ ಸದಸ್ಯರು ಇದ್ದು ಅವರಲ್ಲಿ 958 ಸದಸ್ಯರು ತಮ್ಮ 5 ಮತಗಳನ್ನು ಚಲಾವಣೆ ಮಾಡುವ ಮೂಲಕ ಯುವ ಕಾಂಗ್ರೇಸ್ ರಾಜ್ಯಾಧ್ಯಕ್ಷ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಯ್ಕೆಗಾಗಿ ತಮ್ಮ ಹಕ್ಕು ಚಲಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin