ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ : ಹೆಚ್.ಅಂಜನೇಯ

ಈ ಸುದ್ದಿಯನ್ನು ಶೇರ್ ಮಾಡಿ

H-Anjaneya

ತುಮಕೂರು, ಮೇ 17- ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಮುಂದಿನ ಚುನಾವಣೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಅಂಜನೇಯ ತಿಳಿಸಿದ್ದಾರೆ.  ಸಿದ್ದಗಂಗಾ ಮಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಹಲವಾರು ಮುಖಂಡರಿದ್ದಾರೆ.ಎಲ್ಲರಿಗೂ ಜವಾಬ್ದಾರಿ ಕೊಡಲು ಸಾಧ್ಯವಿಲ್ಲ.ಆ ಕಾರಣ ಕ್ಕಾಗಿಯೇ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲು ಪಕ್ಷ ತೀರ್ಮಾನಿಸಿದೆ ಎಂದು ಹೇಳಿದರು.ಕಾಂಗ್ರೆಸ್ ಶಿಸ್ತು ಬದ್ಧ ಪಕ್ಷ, ಬಿಜೆಪಿ ರೀತಿ ಅಲ್ಲ. ಈಗಾಗಲೇ 150 ಸೀಟು ಗೆದ್ದಿರುವಂತೆ ಬೀಗುತ್ತಿರುವ ಬಿಜೆಪಿ ಸಚಿವ ಸ್ಥಾನವನ್ನು ಹಂಚಿಕೆ ಮಾಡಿದೆ ಎಂದು ವ್ಯಂಗ್ಯವಾಡಿದ ಹೆಚ್.ಅಂಜನೇಯ, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಆದೇಶದಂತೆ ನಡೆಯಲಿದೆ. ಇದರಲ್ಲಿ ಗೊಂದಲವಿಲ್ಲ ಎಂದರು.  ಜಾತಿಗಣತಿ ವರದಿಯನ್ನು ಮುಂದಿನ ಒಂದು ತಿಂಗಳ ಒಳಗೆ ಸಚಿವ ಸಂಪುಟದ ಮುಂದೆ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ವೈಬ್‍ಸೈಟ್‍ಗೆ ಹಾಕಲಾಗುವುದು. ಜನರಿಗೆ ಕುಳಿತಲ್ಲಿಯೇ ಮಾಹಿತಿ ದೊರೆಯುವಂತೆ ಮಾಡಲಾಗುವುದು.ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಜಾತಿ ಗಣತಿ ಅಂಕಿ ಅಂಶಗಳು ಸೋರಿಕೆ ಯಾಗಿಲ್ಲ.ಅದೆಲ್ಲಾ ಸುಳ್ಳು, ಮೊದಲು ಜಾತಿ ಗಣತಿ ವರದಿ ಬಿಡುಗಡೆ ನಂತರ,ನ್ಯಾ.ಎ.ಜೆ.ಸದಾಶಿವ ವರದಿಯನ್ನು ಅಂತಿಮ ಗೊಳಿಸಲಾಗುವುದು ಎಂದರು.

ಸಿದ್ದಗಂಗಾ ಶ್ರೀಗಳ ಬಗ್ಗೆ ನನಗೆ ಅಪಾರವಾದ ಗೌರವ.ನನಗೆ ಬೇಕೆನಿಸಿದಾಗಲೆಲ್ಲಾ ಇಲ್ಲಿಗೆ ಬಂದು ಶ್ರೀಗಳೊಂದಿಗೆ ಚರ್ಚಿಸಿ ಹೋಗುವುದು ವಾಡಿಕೆ. ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದು ಹೆಚ್.ಅಂಜನೇಯ ನುಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin