ನೋಟು ರದ್ದತಿ ಬಳಿಕ 91 ಲಕ್ಷ ಮಂದಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ : ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-Jetley
ನವದೆಹಲಿ, ಮೇ 17-ನೋಟು ರದ್ದತಿ ಬಳಿಕ 91 ಲಕ್ಷಕ್ಕೂ ಹೆಚ್ಚು ಜನರು ತೆರಿಗೆ ಜಾಲದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆದಾಯ ತೆರಿಗೆ ಸಲ್ಲಿಕೆಯಲ್ಲಿಯೂ ಮತ್ತಷ್ಟು ಏರಿಕೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.  ರಾಜಧಾನಿಯಲ್ಲಿ ಆಪರೇಷನ್ ಕ್ಲೀನ್ ಮನಿ ಕುರಿತ ಹೊಸ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ನೋಟು ರದ್ದತಿಯ ಪರಿಣಾಮವಾಗಿ ಡಿಜಿಟಲ್ ವ್ಯವಹಾರದತ್ತ ಜನರ ಒಲವು ಹೆಚ್ಚಾಗುತ್ತಿದೆ ಎಂದರು.  ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ನಗದು ವ್ಯವಹಾರ-ವಹಿವಾಟಿನ ಬಗ್ಗೆ ಭೀತಿ ಮೂಡಿರುವುದರಿಂದ ಡಿಜಿಟೈಸೇಷನ್‍ನತ್ತ ಜನರು ಆಸಕ್ತರಾಗಿದ್ದು, ತೆರಿಗೆ ಆದಾಯದಲ್ಲಿ ವೃದ್ದಿಯಾಗಿದೆ ಎಂದು ಜೇಟ್ಲಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin