ಬಂಧಿತ ಪಾಲಿಕೆ ಮಾಜಿ ಸದಸ್ಯ ನಾಗರಾಜನ ಮನೆಯಲ್ಲಿ ಪೊಲೀಸರಿಂದ ಮತ್ತೊಮ್ಮೆ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

bomb-naga-house
ಬೆಂಗಳೂರು, ಮೇ 17- ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಬಂಧಿತನಾಗಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜನ ಮನೆ, ಕಚೇರಿಯನ್ನು ಪೊಲೀಸರು ಇಂದು ಮತ್ತೊಮ್ಮೆ ಪರಿಶೀಲಿಸಿದ್ದಾರೆ.   ಹೆಣ್ಣೂರು ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ ನಾಗ ಮತ್ತವನ ಸಹಚರರನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ.  ಗೌಪ್ಯ ಸ್ಥಳದಲ್ಲಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ನಾಗ ತನ್ನ ಕಚೇರಿಯಲ್ಲಿ ಇನ್ನಷ್ಟು ಹಣ ಇದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಮತ್ತೊಮ್ಮೆ ನಾಗನ ಮನೆ ಪರಿಶೀಲಿಸಿದ್ದಾರೆ.ಶ್ರೀರಾಮಪುರದಲ್ಲಿನ ಕಚೇರಿ, ಸ್ನೇಹ ಸೇವಾ ಸಮಿತಿ ಹಿಂಭಾಗದ ಮನೆ ಹಾಗೂ ನಾಗನಿಗೆ ಸೇರಿದ ಮತ್ತೊಂದು ಮನೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಇಂದಿನ ಪರಿಶೀಲನೆ ವೇಳೆ ಕಚೇರಿಯಲ್ಲಿ 3 ಲಾಂಗ್ ಹಾಗೂ ಇತರ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಹೊರಹಾಕಿರುವ ನಾಗ ಹಣ ಬದಲಾಯಿಸಲು ಹೊಸ ನೋಟುಗಳನ್ನು ತರುತ್ತಿದ್ದವರನ್ನು ಬೆದರಿಸಿ ಹಣ ಕಸಿದುಕೊಳ್ಳುತ್ತಿದ್ದ ಬಗ್ಗೆಯೂ ಬಾಯಿಬಿಟ್ಟಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin