ಮಾದಕ ವಸ್ತು ಮಾರಾಟ : ನೈಜೀರಿಯಾದ ನಾಲ್ವರು ಪ್ರಜೆಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrested
ಬೆಂಗಳೂರು, ಮೇ 17- ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ನೈಜೀರಿಯಾದ ನಾಲ್ವರು ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಪೀಟರ್ ಚಿಡಿಬೀರ್ (34), ಫ್ರಾಂಕ್ಲಿನ್ ಕೆಲಿಚಿ (33), ಸೇವಿಯರ್ ಚಿಕ್ವಾಡೊ (26) ಮತ್ತು ಸುಝನಿ (59) ಬಂಧಿತರಾಗಿದ್ದು, ಇವರಿಂದ 26 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 18 ಮೊಬೈಲ್‍ಗಳು, 4 ಲ್ಯಾಪ್‍ಟಾಪ್‍ಗಳು, ಪೆನ್‍ಡ್ರೈವ್, ಕಾರು, ಬೈಕ್ ಹಾಗೂ 2500ರೂ. ವಶಪಡಿಸಿಕೊಂಡಿದ್ದಾರೆ.  ಕೆಆರ್ ಪುರಂ ವ್ಯಾಪ್ತಿಯ ಟಿಸಿ ಪಾಳ್ಯ ಮುಖ್ಯರಸ್ತೆಯ ಕೆವಿಆರ್ ಟವರ್‍ನಲ್ಲಿರುವ ಎಸ್‍ಬಿಐ ಬ್ಯಾಂಕ್‍ನ ಎಟಿಎಂ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಸುಮಾರು 200 ಗ್ರಾಂ ತೂಕದ ಮಾದಕ ವಸ್ತು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳ ವಿರುದ್ಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin