ಮೋದಿ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಯುಎಸ್ ನಿಂದ ತಾಯ್ನಾಡಿಗೆ ಮರಳಿದ ಸಾಫ್ಟ್ ವೆರ್ ಇಂಜಿನಿಯರ್..!

ಈ ಸುದ್ದಿಯನ್ನು ಶೇರ್ ಮಾಡಿ

Modi
ಬೆಂಗಳೂರು,ಮೇ 17-ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಸಾಫ್ಟ್ ವೆರ್  ಇಂಜಿನಿಯರ್ ಒಬ್ಬರು ವಿದೇಶಿ ವ್ಯಾಮೋಹ ಅಮೆರಿಕದಿಂದ ತಾಯ್ನಾಡಿಗೆ ಮರಳಿದ್ದಾರೆ.  ತಮ್ಮ ಮುಂದಿನ ಜೀವನವನ್ನು ಭಾರತದ ಸೇವೆಗಾಗಿ ಮುಡುಪಾಗಿಡಲು ನಿರ್ಧರಿಸಿದ್ದೇನೆ. ಮಹಾಸಂಕಲ್ಪ ಸಂಘಟನೆ ಮೂಲಕ ಜನಸೇವೆ ದೀಕ್ಷೆ ಕೈಗೊಂಡು ದೇಶದ ಗ್ರಾಮಗಳ ಅಭಿವೃದ್ದಿ ಕಡೆ ಗಮನಹರಿಸುತ್ತೇನೆ ಎಂದು ಸಾಫ್ಟ್ ವೆರ್  ಇಂಜಿನಿಯರ್ ಚಂದ್ರಕಾಂತ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.



ಮನೆ ಮನೆಗೆ ತೆರಳಿ ಆರೋಗ್ಯ, ಮಾಹಿತಿ ತಂತ್ರಜ್ಞಾನ, ಶುದ್ದ ಕುಡಿಯುವ ನೀರು, ಶೌಚಾಲಯ, ಸ್ವಾವಲಂಬನೆ ಉದ್ಯೋಗ, ಗ್ರಾಮಕ್ಕೊಂದು ಗೋಶಾಲೆ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ನಿಸ್ವಾರ್ಥ ಸೇವೆ, ದೇಶದ ಬಗ್ಗೆ ಅವರಿಗಿರುವ ಕಾಳಜಿಯನ್ನು ಮೆಚ್ಚಿ ವಿದೇಶಿ ವ್ಯಾಮೋಹದಿಂದ ಹೊರಬಂದಿದ್ದೇನೆ. ಇನ್ನು ಮುಂದೆ ನನ್ನ ದುಡಿಮೇ ಏನಿದ್ದರೂ ನನ್ನ ದೇಶಕ್ಕಾಗಿ ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin