ಉತ್ತರಹಳ್ಳಿಯ ದೊರೆ ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಲು ಮೇಯರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

 

padma

ಬೆಂಗಳೂರು, ಮೇ 18- ಉತ್ತರಹಳ್ಳಿಯಲ್ಲಿರುವ ದೊರೆ ಕೆರೆಗೆ ಮೇಯರ್ ಪದ್ಮಾವತಿ ಹಾಗೂ ಎಂಜಿನಿಯರ್‍ಗಳು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು.ದೊರೆ ಕೆರೆಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು, ಗಬ್ಬು ವಾಸನೆ ಬರುತ್ತಿದೆ ಎಂದು ಸಾರ್ವ ಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೆರೆ ಪರಿಶೀಲಿಸಿದ ಮೇಯರ್, ಕೊಳಚೆ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು. ಕೊಳಚೆ ನೀರು ಬೇರೆ ಕಡೆ ಹೋಗಲು ಪರ್ಯಾಯ ಕ್ರಮ ತೆಗೆದು ಕೊಳ್ಳಬೇಕು. ಮಳೆಗಾಲಕ್ಕೆ ಮೊದಲೇ ಈ ಎಲ್ಲ ಕಾಮಗಾರಿ ಪೂರ್ಣಗೊಂಡು ಈ ಕೆರೆಯನ್ನು ಉಳಿಸಬೇಕು ಎಂದು ಸೂಚಿಸಿದರು.

 
ಮೇಯರ್ ಭೇಟಿ ವೇಳೆ ಸ್ಥಳೀಯರು ದಾವಿಸಿ ಇಲ್ಲಿ 1 ಎಂಎಲ್‍ಡಿ ನೀರು ಸಂಸ್ಕರಿಸುವ ಎಸ್‍ಟಿಪಿ ಪ್ಲಾಂಟ್ ಇದೆ. ಹೆಚ್ಚುವರಿ ನೀರು ಕೆರೆಯನ್ನು ಸೇರುತ್ತಿದೆ. ಕೆರೆ ಬಳಿ ವಾಕಿಂಗ್ ಮಾಡಲು ಆಗುತ್ತಿಲ್ಲ. ವಾಸನೆಯಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.ಈಗಾಗಲೇ ಐದು ಬಾರಿ ಇಲ್ಲಿ ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೂ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಜನರು ಬೇಸರ ವ್ಯಕ್ತ ಪಡಿಸಿದರು.ಇದಕ್ಕೆ ಸ್ಪಂದಿಸಿದ ಮೇಯರ್ ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯಲು ಬಾಕ್ಸ್ ಡ್ರೈನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಶೀಘ್ರವೇ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಬೃಹತ್ ನೀರುಗಾಲುವೆ ಮುಖ್ಯ ಎಂಜಿನಿಯರ್ ಸಿದ್ದೇಗೌಡ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin