ಕಾರು-ಬೈಕ್ ಮುಖಾಮುಖಿ  ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವು ,ನಾಲ್ವರು ತೀವ್ರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

malavalli-2

ಮಳವಳ್ಳಿ, ಮೇ 18- ವೇಗವಾಗಿ ಬರುತ್ತಿದ್ದ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು , ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕನಕಪುರ-ಮಳವಳ್ಳಿ 209 ರಸ್ತೆಯ ಅಟ್ಟುವನಹಳ್ಳಿ ಗ್ರಾಮದ ಬಳಿ ಜುರುಗಿದೆ.ತಾಲ್ಲೂಕಿನ ಗೌಡಗೆರೆ ಗ್ರಾಮದ ವಾಸಿ ಸಂತೋಷ್(33) ಮೃತಪಟಿದ್ದು , ಹಿಂಬದಿಯ ಸವಾರ ಅದೆ ಗ್ರಾಮದ ಕೃಷ್ಣ ಹಾಗೂ ಕಾರಿನಲ್ಲಿದ್ದ ಮೂವರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಂತೋಷ್ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು ಸಂಬಂಧಿಕರ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ.

ಸಂಜೆ 5ಗಂಟೆ ಸಮಯದಲ್ಲಿ ಕಾರ್ಯನಿಮಿತ್ತ ತನ್ನ ಹೀರೋ ಹೊಂಡ ಬೈಕ್‍ನಲ್ಲಿ ಹಾಡ್ಲಿ ಸರ್ಕಲ್‍ಗೆ ತನ್ನ ಸ್ನೇಹಿತ ಕೃಷ್ಣನ ಜೊತೆ ಬಂದಿದ್ದು ವಾಪಸ್ಸು ಗ್ರಾಮಕ್ಕೆ ತೆರಳುತ್ತಿದ್ದಾಗ ಅಟ್ಟುವನಹಳ್ಳಿ ಗ್ರಾಮದ ಬಳಿ ಮಳವಳ್ಳಿ ಕಡೆಯಿಂದ ಬರುತ್ತಿದ್ದ ಇನೋವ ಕಾರೊಂದು ವೇಗವಾಗಿ ಬಂದು ಬೈಕ್‍ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಲಕ್ಮಿ,ಲಕ್ಮಮ್ಮ ಹಾಗೂ ಪ್ರಮೀಳಾ ಅವರು ತೀವ್ರವಾಗಿ ಗಾಯಗೊಂಡಿದ್ದು ಅಪಘಾತ ನಂತರ ಕಾರು ಚಾಲಕ ಪರಾರಿಯಾಗಿದ್ದಾನೆ.ಸುದ್ದಿ ತಿಳಿದ ಕೊಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin