ಜೂಜಾಟದಲ್ಲಿ ತೊಡಗಿದ್ದ ಐವರ ಬಂಧನ : 61 ಸಾವಿರ ನಗದು ವಶ
ಮೈಸೂರು, ಮೇ 18-ಜೂಜಾಟದಲ್ಲಿ ತೊಡಗಿದ್ದ ಐದು ಮಂದಿಯನ್ನು ಸಿಸಿಬಿ ಮತ್ತು ನಜರ್ಬಾದ್ ಠಾಣೆ ಪೊಲೀಸರು ಬಂಧಿಸಿ 61 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.ಮಾಚಪ್ಪ (39), ರಾಮು(47), ನಾಗೇಂದ್ರ (50), ನಾಗೇಶ್(30), ಪ್ರಕಾಶ್ (40) ಬಂಧಿತ ಆರೋಪಿಗಳು.ನಗರದ ನಜರ್ಬಾದ್ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಲೋಕರಂಜನ್ ಮಹಲ್ ರಸ್ತೆಯಲ್ಲಿನ ರಾಜು ರೆಸಿಡೆನ್ಸಿ ಹಿಂಭಾಗದ ಮೈದಾನದಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಪಡೆದ ಸಿಸಿಬಿ ಮತ್ತು ನಜರ್ಬಾದ್ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿಯಲ್ಲಿ ಪಣಕ್ಕಿಟ್ಟಿದ್ದ 61 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments