ರೈಲ್ವೆ ಬೇಡಿಕೆಗಳ ದೇವೇಗೌಡರ ಹೋರಾಟ ಫಲಶ್ರುತಿ ತಂದಿದೆ : ವೈ.ಎಸ್.ವಿ. ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

datta

ಕಡೂರು, ಮೇ 18- ಕಡೂರು ಮತ್ತು ಬೀರೂರು ರೈಲ್ವೆ ನಿಲ್ದಾಣಗಳಿಗೆ ಶತಮಾನಗಳ ಇತಿಹಾಸವಿದೆ. ದೇವೇಗೌಡರು ಸಂಸತ್ ಸದಸ್ಯರಾದ ಮೇಲೆ ರೈಲ್ವೆ ಬೇಡಿಕೆಗಳಿಗೆ ಹೋರಾಟ ಮಾಡಲಾಗಿದ್ದು, ಕೆಲವು ವಿಷಯಗಳಲ್ಲಿ ಫಲಶ್ರುತಿ ತಂದಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಶಿವಮೊಗ್ಗ-ಬೆಂಗಳೂರು ಇಂಟರ್ಸಿಟಿ ರೈಲು ಕಡೂರಿನಲ್ಲಿ ನಿಲುಗಡೆ ಆಗುತ್ತಿರಲಿಲ್ಲ. ದೇವೇಗೌಡರ ಪ್ರಯತ್ನದ ಫಲವಾಗಿ ಆ ರೈಲು ಕಡೂರಿನಲ್ಲಿ ನಿಲುಗಡೆಯಾಗಿದೆ. ಬೀರೂರಿನಿಂದ ಅರಸೀಕೆರೆವರೆಗೆ ಜೋಡಿಹಳಿ ನಿರ್ಮಾಣಕ್ಕೆ ದೇವೇಗೌಡರ ಪ್ರಯತ್ನದಿಂದಾಗಿ ಕಾಮಗಾರಿ ಆಗಿದೆ.

ಕಡೂರು-ಚಿಕ್ಕಮಗಳೂರು ರೈಲು ಮಾರ್ಗಕ್ಕೆ ದೇವೇಗೌಡರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಚಾಲನೆ ದೊರೆತು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇದಕ್ಕೆ ಒಂದು ರೂಪ ದೊರೆತಿದೆ ಎಂದರು.ಬರ, ತೆಂಗು ಸಮಸ್ಯೆ, ಗೋಶಾಲೆಗಳನ್ನು ನೋಡಿ ಮನಸ್ಸಿಗೆ ನೋವುಂಟಾಗಿದ್ದರಿಂದ ದೇವೇಗೌಡರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್, ಸೀಗೆಹಡ್ಲು ಹರೀಶ್, ಜಿಗಣೇಹಳ್ಳಿ ನೀಲಕಂಠಪ್ಪ, ಬಿಸಲೇಹಳ್ಳಿ ನಂಜುಂಡಪ್ಪ, ನೀಲಕಂಠಪ್ಪ ಮುಂತಾದವರು ಉಪಸ್ಥಿತರಿದ್ದರು

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin