ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Chudidar

ಬೆಂಗಳೂರು,ಮೇ 18-ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಭಾಗ್ಯ ಜಾರಿ ಮಾಡಲಿದೆ. ಜೂನ್ ತಿಂಗಳಿನಿಂದ ಆರಂಭವಾಗಲಿರುವ ರಾಜ್ಯದ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಚೂಡಿದಾರ್ ವಿತರಣೆ ಮಾಡಲಿದೆ.  ಪ್ರಸ್ತುತ ವಿದ್ಯಾರ್ಥಿನಿಯರಿಗೆ ಕಂದು ಮತ್ತು ನೀಲಿ ಮಿಶ್ರಿತ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿರುವುದರಿಂದ ಜೂನ್ ತಿಂಗಳಿನಿಂದಲೇ ಸೆಲ್ವರ್ ಕಮೀಜ್ ಚೂಡಿದಾರ ಭಾಗ್ಯ ಸಿಗಲಿದೆ.   ನಾವು ಬರುವ ಜೂನ್ ತಿಂಗಳಿನಿಂದಲೇ ವಿದ್ಯಾರ್ಥಿನಿಯರಿಗೆ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಚೂಡಿದಾರ್ ನೀಡಲು ಈಗಾಗಲೇ ಡಿಡಿಪಿಐಗಳ ಮೂಲಕ ಸುತ್ತೋಲೆ ಹೊರಡಿಸಿದ್ದೇವೆ. ಇದಕ್ಕೆ ಬೇಕಾದ ಅಗತ್ಯ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪ್ರಸ್ತುತ 8ರಿಂದ 10ನೇ ತರಗತಿವರೆಗೆ ಚೂಡಿದಾರ್‍ಗಳನ್ನು ವಿತರಣೆ ಮಾಡಲಾಗುವುದು ಸುಮಾರು 8.50 ಲಕ್ಷ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು , ಇದಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಹಲವು ಕೋಟಿ ಹೊರೆ ಬೀಳಲಿದೆ. ಆದರೂ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.  ವಿದ್ಯಾರ್ಥಿನಿಯರು ಸ್ಕರ್ಟ್ ಧರಿಸುವುದರಿಂದ ಕಳೆದ ವರ್ಷ ಸಾಕಷ್ಟು ಲೈಂಗಿಕ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದ್ದವು. ಅಲ್ಲದೆ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಶಿಸ್ತುಬದ್ಧವಾಗಿ ಕುಳಿತುಕೊಳ್ಳಲು ಕಿರಿಕಿರಿಯುಂಟಾಗುತ್ತಿತ್ತು. ಸ್ವತಃ ಪೋಷಕರು ಕೂಡ ತಗಾದೆ ತೆಗೆದಿದ್ದರು.
ಈ ಎಲ್ಲ ಸಾಧಕ-ಬಾಧಕಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ , ಪೋಷಕರು, ಶಿಕ್ಷಣ ತಜ್ಞರು, ಸಮಾಜ ಸುಧಾರಕರು ಸೇರಿದಂತೆ ಮತ್ತಿತರರ ಸಭೆ ನಡೆಸಿ ಸ್ಕರ್ಟ್, ಶರ್ಟ್ ಬದಲಿಗೆ ವಿದ್ಯಾರ್ಥಿನಿಯರ ಚೂಡಿದಾರ್ ಧರಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin