ಬಾಲಿವುಡ್ ಹಿರಿಯ ನಟಿ ರೀಮಾ ಲಾಗೂ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Reema-lagu
ಮುಂಬೈ, ಮೇ 18-ಬಾಲಿವುಡ್ ಸೂಪರ್‍ಹಿಟ್ ಹಮ್ ಆಪ್ ಕೆ ಕೌನ್, ಕಲ್ ಹೊ ನಾ ಹೊ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟಿ ರೀಮಾ ಲಾಗೂ ಇಂದು ಮುಂಜಾನೆ ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.  ನಿನ್ನೆ ತಡ ರಾತ್ರಿ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನಸುಕಿನಲ್ಲಿ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ರಾಮ್ ನಾರಾಯಣ್ ತಿಳಿಸಿದ್ದಾರೆ.  ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿ ಅಲ್ಲದೇ ಅನೇಕ ಟೆಲಿವಿಷನ್ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು.



ಮೈನೆ ಪ್ಯಾರ್ ಕಿಯಾ, ಸಾಜನ್, ವಾಸ್ತವ್, ಕುಚ್ ಕುಚ್ ಹೋತಾ ಹೈ, ಹಮ್ ಸಾಥ್ ಸಾಥ್ ಹೈ ಮೊದಲಾದ ಸೂಪರ್ ಹಿಟ್ ಚಿತ್ರಗಳ ಪೋಷಕ ಪಾತ್ರಗಳಲ್ಲಿ ರೀಮಾ ಲಾಗೂ ಮಿಂಚಿದ್ದರು. ತಾಯಿ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದ ಅವರು ನಾಲ್ಕು ದಶಕಗಳಿಂದ ನಟನಾ ವೃತ್ತಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.  ರೀಮಾ ನಿಧನಕ್ಕೆ ಬಾಲಿವುಡ್ ತಾರೆಯರು ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin