ಬಿಎಸ್‍ವೈ ಟೀಮ್ ಕನಸು ನನಸಾಗಲಿ : ಸಚಿವ ಅನಂತ್‍ಕುಮಾರ್ ಹಾರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ananth
ತುಮಕೂರು,ಮೇ.18-ಬಿಎಸ್‍ವೈ ಟೀಮ್ ಕನಸು ನನಸಾಗಲಿ: ಸಿದ್ಧಗಂಗಾ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು ಹಾರೈಸಿದ್ದು, ಸದ್ಯದಲ್ಲೇ ಮಠಕ್ಕೆ ಭೇಟಿ ನೀಡಿ ಖುದ್ದಾಗಿ ಆರೋಗ್ಯ ವಿಚಾರಿಸುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ತಿಳಿಸಿದರು.
ಬೆಳಗ್ಗೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಎಲ್ಲ ಜನ ಶ್ರೀಗಳು ಬೇಗ ಗುಣಮುಖರಾಗಲೆಂದು ಹಾರೈಸುತ್ತಿದ್ದಾರೆ ಎಂದರು.  ಬಿಜೆಪಿ ಹಮ್ಮಿಕೊಂಡಿರುವ ಬರ ಅಧ್ಯಯನ ಅಭಿಯಾನದಲ್ಲಿ ತಾವು ಸೇರಿದಂತೆ ಎಲ್ಲ ಸಚಿವರು, ಮುಖಂಡರು ಭಾಗಿಯಾಗುವುದಾಗಿ ತಿಳಿಸಿದರು.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಅಭಿಯಾನ ಇಂದಿನಿಂದ ಪ್ರಾರಂಭವಾಗಿದೆ. ಈಶ್ವರಪ್ಪನವರೂ ಭಾಗಿಯಾಗಿದ್ದಾರೆ. ನಾವು ಪಂಚ ಪಾಂಡವರಿದ್ದಂತೆ. ಒಂದು ಮುಷ್ಠಿಯಂತೆ ಒಗ್ಗಟ್ಟು ಸಾಧಿಸಿದ್ದೇವೆ ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.  ಕಾರ್ಯಕರ್ತರು, ಜನರು, ರೈತರನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತೇವೆ. ಇದೊಂದು ವ್ಯಾಪಕವಾದ ಅಭಿಯಾನವಾಗಿದೆ ಎಂದು ಹೇಳಿದರು.  ಪ್ರಧಾನಿ ಮೋದಿಯವರ ಆಡಳಿತ ವಿಶ್ವಾದ್ಯಂತ ಎಲ್ಲರನ್ನೂ ಸೆಳೆಯುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಜನರ ಆಶೀರ್ವಾದ ಬಿಜೆಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


 

ಯಡಿಯೂರಪ್ಪ ಅಂಡ್ ಟೀಮ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಇದು ನನಸಾಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅನಂತ್‍ಕುಮಾರ್ ಗರಂ ಆಗಿ ಪ್ರತಿಕ್ರಿಯಿಸಿ ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಕರ್ನಾಟಕದಲ್ಲೂ ಅದೇ ಗತಿ ಎಂದು ಹೇಳಿದರು.  ಕೇಂದ್ರ ಸಚಿವ ಸದಾನಂದಗೌಡ, ಉಸ್ತುವಾರಿ ಮುರಳೀಧರ್‍ರಾವ್, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ರ್, ಮುಖಂಡರಾದ ಆರ್.ಅಶೋಕ್, ಸಿ.ಟಿ.ರವಿ, ಸೊಗಡು ಶಿವಣ್ಣ, ಶ್ರೀರಾಮುಲು, ವಿ.ಸೋಮಣ್ಣ, ಸುರೇಶ್‍ಗೌಡ, ಜಿ.ಎಸ್.ಬಸವರಾಜು ಸೇರಿದಂತೆ ಬಹುತೇಕ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.  ಮಠದಿಂದ ನೇರ ಮರಳೂರು ದಿಣ್ಣೆಗೆ ತೆರಳಿ ಜನರಿಂದ ಮಾಹಿತಿ ಪಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin