ರೈತರ ಗೇಣಿದಾರರ, ಕೂಲಿಕಾರರ ಸಾಲ ಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

malavali

ಮಳವಳ್ಳಿ, ಮೇ 18- ಜಮೀನು ದುರಸ್ಥಿ, ರೈತರ ಸಾಲ ಮನ್ನಾ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಜಾನುವಾರುಗಳಿಗೆ ಮೇವು ವಿತರಿಸಬೇಕು, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.ಪ್ರಾಂತ ರೈ ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ತಾಲೂಕಿನ ಅಮೃತೇಶ್ವರನಹಳ್ಳಿ ಸರ್ವೆ ನಂ.158, ಕಂದೇಗಾಲದ ಸ.ನಂ.35, ಗೌಡಗರೆ ಸ.ನಂ.34,156 ಹಾಗೂ 188.ದೇವಿಉಪುರದ ಸ.ನಂ.46 ಜಮೀನುಗಳನ್ನು ತಕ್ಷಣ ದುರಸ್ತಿಪಡಿಸಬೇಕು, ರೈತರ ಗೇಣಿದಾರರ, ಕೂಲಿಕಾರರ ಸಾಲ ಮನ್ನಾ ಮಾಡಬೇಕು, ರೈತ ಮಕ್ಕಳಿಗೆ ಶಾಲಾ ಕಾಲೇಜುಗಳ ಶುಲ್ಕ ಮನ್ನಾ ಮಾಡಬೇಕು,ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ, ಆತನ ಹೆಂಡತಿಗೆ ಮಾಸಿಕ 5000 ವೇತನ, ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ತೀವ್ರತರ ಬರದಿಂದ ರಾಜ್ಯದೆಲ್ಲಡೆ ರೈತರು ಸಂಕಷ್ಠದಲ್ಲಿದು ಅವರ ನೆರವಿಗೆ ಹಲವು ಯೋಜನೆಗಳನ್ನು ರೂಪಿಸಿ ರೈತರಿಗೆ ನ್ಯಾಯ ಒದಗಿಸಿ ಆದರೆ ಅನ್ಯಾಯ ಮಾಡಬೇಡಿ ಎಂದ ಅವರು ನಿರ್ಲಕ್ಷತೆ,ದುಷ್ಟ ಅಧಿಕಾರಿಗಳ ಕಾರ್ಯವೈಖರಿಗೆ ಅವರು ಈ ಸಂದರ್ಭದಲ್ಲಿ ಅಕ್ರೋಶ ವ್ಯಕ್ತಪಡಿಸಿದರು.
ನಂತರ ಸರ್ಕಾರದ ಕಂದಾಯ ಸಚಿವರಿಗೆ ತಹಶೀಲ್ದಾರ್ ಮೂಲಕ 16 ಬೇಡಿಕೆಗಳ ಮನವಿಯನ್ನು ನೀಡಿದರು.ಸಂಘದ ಕಾರ್ಯದರ್ಶೀ ಎನ್.ಲಿಂಗರಾಜು,ಉಪಾಧ್ಯಕ್ಷ ಟಿ.ಹೆಚ್.ಆನಂದ್, ಲಿಂಗರಾಜು, ತಾಯಮ್ಮ, ಸಹ ಕಾರ್ಯದರ್ಶೀ ಜವರಯ್ಯ, ಮುಖಂಡರಾದ ಜಕ್ಕಿರೆಗೌಡ, ಸಹ ಕಾರ್ಯದರ್ಶಿ ಚಿಕ್ಕಿಸ್ವಾಮಿ, ಮಹೇಶ್ ಸೇರಿದಮತೆ ನೂರಾರು ಮಹಿಳೆಯರು, ರೈತ ಮುಖಂಡರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin