ಬಿಜೆಪಿ ನಾಯಕರಿಂದ ಬರಗಾಲ ಪ್ರವಾಸದ ನಾಟಕ : ಕುಮಾರಸ್ವಾಮಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

HDK
ರಾಮನಗರ, ಮೇ 19- ಬಿಜೆಪಿ ನಾಯಕರು ಬರಗಾಲ ಪ್ರವಾಸ ಮಾಡುವ ನಾಟಕವಾಡುತ್ತಿದ್ದಾರೆ. ದಲಿತರು, ಮತ್ತು ಮುಸ್ಲಿಂಬಾಂಧವರ ಜ್ಞಾನಪಕ ಈಗ ಬಂದಿದೆ. ಹೋಟೆಲ್‍ನಲ್ಲಿ ತಿಂಡಿ ಕಟ್ಟಿಸಿಕೊಂಡು ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.  ಖಾಸಗಿ ಕಾರ್ಯಕ್ರಮಕ್ಕೆ ಮಾಗಡಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವೇಗಕ್ಕೆ ತಡೆಹಾಕಲು ಕುತಂತ್ರ ಸೃಷ್ಟಿಸಲಾಗಿದೆ. ಎಸ್‍ಐಟಿ ತನಿಖೆಗೆ ನಾನು ಬಗ್ಗುವುದಿಲ್ಲ. ಎಸ್‍ಐಟಿ ಸಮನ್ಸ್ ಜಾರಿ ಮಾಡಲು ಸರ್ಕಾರದ ಒತ್ತಡವಿದೆ. ಇದರಲ್ಲಿ ಹಲವು ಸಚಿವರ ಕೈವಾಟ ಇರುವುದು ನನಗೆ ಗೊತ್ತಿದೆ.   ನನ್ನ ಜನಪ್ರಿಯತೆಯನ್ನು ಕುಂಠಿತಗೊಳಿಸಲು ಹೊರಟಿದ್ದು, ಈಗಾಗಲೇ ತನಿಖೆಗೆ ಹಾಜರಾಗಿ ಮಾಹಿತಿ ನೀಡಿದ್ದೇನೆ. ಮುಂದೆಯೂ ಸಹ ಸಹಕರಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವ ಮಟ್ಟಿಗೆ ಕಾರ್ಯ ನಿರ್ವಹಿಸಿದ್ದರು ಎಂಬುದು ತಿಳಿದಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಪರಸ್ಪರ ಆರೋಪ ಮಾಡಿದ್ದು, ಶೆಟ್ಟರ್ ಕುಟುಂಬದಿಂದಲೇ ಲೂಟಿ ಎಂದು ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ. ರೈತರ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ. ನೀರಾವರಿ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲೂಟಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯಲಿದೆ ಎಂದರು.  ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin