ರಾಜ್ಯಾದ್ಯಂತ ಬರಲಿವೆ ಎಚ್.ಡಿ.ದೇವೇಗೌಡರ ಹೆಸರಿನ ‘ನಮ್ಮ ಅಪ್ಪಾಜಿ ಕ್ಯಾಂಟೀನ್’

ಈ ಸುದ್ದಿಯನ್ನು ಶೇರ್ ಮಾಡಿ

namma-appaji-canteen

ಬೆಂಗಳೂರು,ಮೇ 19-ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಟಿ.ಶರವಣ ಘೋಷಿಸಿದ್ದಾರೆ.  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬದ ಅಂಗವಾಗಿ ಶುಭಕೋರಿ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೊದಲ ಹಂತವಾಗಿ ನಗರದ ಬಸವನಗುಡಿಯಲ್ಲಿ ಕ್ಯಾಂಟೀನ್ ಆರಂಭ ಮಾಡುತ್ತೇವೆ. ಬಳಿಕ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.



ರೈತರಿಂದಲೆ ನೇರವಾಗಿ ಆಹಾರ ಧಾನ್ಯ ಖರೀದಿಸಿ ತಿಂಡಿ, ಅಡುಗೆ ಮಾಡಲಾಗುವುದು. ಇಡ್ಲಿ, ವಡೆ, ಚಟ್ನಿ, ಸಾಂಬರ್, ಕಾಫಿಗೆ ಕೇವಲ 5 ರೂ. ನಿಗದಿ ಮಾಡಲಾಗುವುದು. ಮಧ್ಯಾಹ್ನದ ಊಟಕ್ಕೆ 10 ರೂ. ನಿಗದಿಪಡಿಸಲಾಗಿದೆ. ಬೆಳಗ್ಗೆ 5ರಿಂದ ಸಂಜೆ 4 ಗಂಟೆವರೆಗೂ ಕ್ಯಾಂಟೀನ್ ತೆರೆದಿರುತ್ತದೆ ಎಂದು ತಿಳಿಸಿದರು.   ಎಷ್ಟೇ ಜನ ಬಂದರೂ ತಿಂಡಿ, ಊಟ ವ್ಯವಸ್ಥೆ ಮಾಡಲಾಗುವುದು. ರುಚಿಕರ ತಿಂಡಿ, ಊಟ ಸಿಗುವಂತೆ ನೋಡಿಕೊಳ್ಳಲು ಟೆಕ್ನಿಕಲ್ ಟೀಮ್ ರಚನೆ ಮಾಡಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin