ಸೃಷ್ಟಿ ವೈಚಿತ್ರ್ಯವೆಂಬಂತೆ ಒಂದೇ ಕಣ್ಣು,ಕಿವಿ ಹೊಂದಿರುವ ಮೇಕೆ ಜನನ

ಈ ಸುದ್ದಿಯನ್ನು ಶೇರ್ ಮಾಡಿ

sheep
ಅಸ್ಸಾಮ್, ಮೇ 19- ಸೃಷ್ಟಿಯ ವೈಚಿತ್ರ್ಯವನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ.ಒಂದೇ ಸಲಕ್ಕೆ 6ಕ್ಕೂ ಹೆಚ್ಚು ಮರಿಗಳ ಜನನ, ಒಂದೇ ದೇಹ ಎರಡು ತಲೆಗಳೊಂದಿಗೆ ಮೇಕೆಗಳು ಜನಿಸಿರುವುದನ್ನು ನಾವು ಕೇಳಿದ್ದೇವೆ, ಓದಿದ್ದೇವೆ.ಸೃಷ್ಟಿ ವೈಚಿತ್ರ್ಯವೆಂಬಂತೆ ಒಂದೇ ಕಣ್ಣು , ಒಂದೇ ಕಿವಿ ಹೊಂದಿರುವ ಮೇಕೆಯೊಂದು ಜನಿಸಿದ್ದು ಸುತ್ತಮುತ್ತಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ.ಆಸ್ಸಾಮ್‍ನ ಗ್ರಾಮವೊಂದರಲ್ಲಿ ಜನಿಸಿರುವ ಮೇಕೆ ಮರಿಯು ಕ್ಲೈಕೋಪಿಯಾ ರೋಗಕ್ಕೆ ತುತ್ತಾಗಿದ್ದೇ ಈ ರೀತಿ ಜನಿಸುವುದಕ್ಕೆ ಕಾರಣ ಎಂದು ಸ್ಥಳೀಯ ವೈದ್ಯರು ಹೇಳಿದ್ದಾರೆ.ಮೇಕೆಯ ಮಾಲೀಕ ಮುಕ್‍ಹುರಿ ದಾಸ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿಯ ಮರಿ ಜನಿಸಿರುವುದು ನನಗೆ ತುಂಬಾ ಶಾಕ್ ನೀಡಿದೆ, ಆದರೆ ಇದನ್ನು ಶಾಪ ವೆಂದು ತಿಳಿಯದೆ ನಮ್ಮ ಮನೆಯ ಮಕ್ಕಳಂತೆಯೇ ಜೋಪಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.ಮೇಕೆ ಮರಿಯ ಆರೋಗ್ಯ ಉತ್ತಮವಾಗಿದ್ದು ಎಲ್ಲ ಮೇಕೆ ಮರಿಗಳಂತೆಯೇ ಇದು ಕೂಡ ಹಾಲು ಕುಡಿಯುತ್ತಿದೆ. ಆದರೆ ಈ ಮೇಕೆ ಮರಿಯು ನೋಡಲು ವಿಚಿತ್ರವಾಗಿದ್ದು ಸುತ್ತಮುತ್ತಲಿನ ಗ್ರಾಮಗಳ ಜನರು ಈ ಮರಿಯನ್ನು ವೀಕ್ಷಿಸಲು ತಂಡೋಪತಂಡವಾಗಿ ಬರುತ್ತಿದ್ದಾರೆ ಎಂದು ಮುಕ್‍ಹುರಿ ದಾಸ್ ಸಂತಸ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin