150 ಕೋಟಿ ಕಿಕ್ ಬ್ಯಾಕ್ ಪ್ರಕರಣ : ಜನಾರ್ದನ ರೆಡ್ಡಿ ವಿಚಾರಣೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Janardana-reddy

ಬೆಂಗಳೂರು, ಮೇ 19- ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 150 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಭಾರೀ ಸಂಚಲನ ಮೂಡಿಸಿದ್ದ ಗಣಿ ಧಣಿ ಜನಾರ್ದನ ರೆಡ್ಡಿ ಹೇಳಿಕೆ ಈಗ ಮತ್ತೆ ಮರು ಜೀವ ಪಡೆದಿದೆ.  ಪ್ರಕರಣ ಕುರಿತಂತೆ ಈಗ ಎಸ್‍ಐಟಿ ಜನಾರ್ದನ ರೆಡ್ಡಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದು ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.  ಹೆಬ್ಬಾಳದಲ್ಲಿರುವ ಎಸ್‍ಐಟಿ ಕಚೇರಿಯಲ್ಲಿ ಇಂದು ಮಧ್ಯಾಹ್ನ ಜನಾರ್ದನ ರೆಡ್ಡಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದು, ಇದು ಭಾರೀ ಕುತೂಹಲ ಕೆರಳಿಸಿದೆ.2007ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಸದನದಲ್ಲಿಯೇ ಜನಾರ್ದನ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಕುಮಾರ
ಸ್ವಾಮಿ ಅವರ ಮೇಲೆ 150 ಕೋಟಿ ಗಣಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು.  ಈಗಾಗಲೇ ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಹಲವು ರಾಜಕಾರಣಿಗಳನ್ನು ವಿಚಾರಣೆ ನಡೆಸಿರುವ ಎಸ್‍ಐಟಿ ಈಗ ಜನಾರ್ದನ ರೆಡ್ಡಿ ಅವರ ಬಳಿಯೂ ಇರುವಂತಹ ಸಾಕ್ಷ್ಯಾಧಾರಗಳನ್ನು ಕೇಳುತ್ತಿದೆ.
ನಿನ್ನೆಯಷ್ಟೇ ಕುಮಾರಸ್ವಾಮಿ ಅವರು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಅವರು ನೀಡಿರುವ ಹೇಳಿಕೆಯ ಕುರಿತಂತೆ ಇಂದು ಜನಾರ್ದನ ರೆಡ್ಡಿ ನೀಡಿರುವ ಮಾಹಿತಿ ಏನೆಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 
ವಿಚಾರಣೆ ಮುಗಿಸಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಸ್‍ಐಟಿ ಮುಂದೆ ನನ್ನ ಬಳಿ ಇದ್ದಂತಹ ಎಲ್ಲಾ ಸಾಕ್ಷಿಗಳನ್ನು ಸಲ್ಲಿಸಿದ್ದೇನೆ ಎಂದರು. ಇದೇ ವೇಳೆ ನಿಮ್ಮ ಬಳಿ ಲಂಚ ಪಡೆದ ಸಿಡಿ ಇದೆಯಾ ಎಂಬ ಪ್ರಶ್ನೆಗೆ ಮುಗುಳ್ನಗೆ ಬೀರುತ್ತಾ ಇದೆಲ್ಲಾ ಅಧಿಕಾರಿಗಳ ಮುಂದೆಯೇ ಹೇಳುತ್ತೇನೆ ಎಂದು ಹೊರಟರು.

Facebook Comments

Sri Raghav

Admin