ಅಮ್ಮ ಚೇತರಿಸಿಕೊಳ್ಳುತ್ತಿದ್ದಾರೆ, ವದಂತಿಗಳಿಗೆ ಕಿವಿಗೊಡಬೇಡಿ : ಶಿವರಾಜ್‍ಕುಮಾರ್ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

shivaraj
ಬೆಂಗಳೂರು, ಮೇ 20-ಅಮ್ಮನ ಆರೋಗ್ಯದ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ. ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಪಾರ್ವತಮ್ಮನವರ ಪುತ್ರ , ನಟ ಶಿವರಾಜ್‍ಕುಮಾರ್ ಸ್ಪಷ್ಟಪಡಿಸಿದರು. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮ ನಿನ್ನೆ ಹೇಗಿದ್ದರೋ ಹಾಗೆಯೇ ಇದ್ದಾರೆ. ತೀವ್ರ ನಿಗಾಘಟಕದಲ್ಲಿ ವೆಂಟಿಲೇಟರ್ ಸಹಾಯದಲ್ಲಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾದಂತೆ ಕಂಡುಬರುತ್ತದೆ. ಯಾರೋ ಏನೋ ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ. ಅಪ್ಪಾಜಿಯವರ ಆರೋಗ್ಯದ ಬಗ್ಗೆಯೂ ನಾವು ಎಲ್ಲ ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದೆವು. ಈಗಲೂ ಪ್ರತಿದಿನ ಅಮ್ಮನ ಆರೋಗ್ಯದ ಮಾಹಿತಿ ನೀಡುತ್ತಿದ್ದೇವೆ. ಯಾವುದೇ ವದಂತಿಗಳಿಗೆ ಕಿವಿಗೊಡುವುದು ಬೇಡ ಎಂದಿದ್ದಾರೆ.



ನಟ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿ, ಅಮ್ಮ ಚೆನ್ನಾಗಿದ್ದಾರೆ. ವೆಂಟಿಲೇಟರ್‍ನಲ್ಲಿ ಇರುವವರೆಗೆ ಸೀರಿಯಸ್ ಇದ್ದೇ ಇರುತ್ತದೆ. ಅವರು ಚೆನ್ನಾಗಿಲ್ಲ ಎಂದರೆ ನಾವು ಹೀಗಿರಲು ಸಾಧ್ಯವೆ? ಅವರ ಬಳಿ ಮಾತನಾಡಲು ಆಗುತ್ತಿಲ್ಲ. ಆದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿರುವುದು ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.  ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ.ನರೇಶ್ ಶೆಟ್ಟಿ , ಡಾ.ಸಂಜಯ್ ಕುಲಕರ್ಣಿ ಮಾತನಾಡಿ, ನಿನ್ನೆಯಂತೆಯೇ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಕ್ರಿಯೋಟಿನ್ ಹೇಗಿದೆಯೋ ಹಾಗೇ ಇದೆ. ಹಾಗಾಗಿ ಡಯಾಲಿಸಿಸ್ ನಿಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin