ಗಂಡು ಮಗುವಿಗಾಗಿ ಪತಿ ಕಿರುಕುಳ : ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

firing
ಮೋರ್ಬಿ (ಗುಜರಾತ್), ಮೇ 20-ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಪತಿ ಮತ್ತು ಆತನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬಳು ನವಜಾತ  ಹೆಣ್ಣು ಶಿಶು ಸೇರಿದಂತೆ ಮತ್ತೊಬ್ಬ ಪುತ್ರಿಯೊಂದಿಗೆ ಬೆಂಕಿ ಹಚ್ಚಿಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗುಜರಾತ್‍ನ ಮೋರ್ಬಿ ಪಟ್ಟಣದಲ್ಲಿ ನಡೆದಿದೆ.ಶೀತಲ್ ಪಾರ್ಮರ್ (26) ತನ್ನ 13 ದಿನಗಳ ಮಗು ಪಾಯಲ್ ಮತ್ತು ಮೂರು ವರ್ಷದ ಮತ್ತೊಬ್ಬ ಹೆಣ್ಣು ಮಗು ಜಿಂಕಲ್ ಜೊತೆ ಸಾವಿಗೆ ಶರಣಾಗಿದ್ದಾಳೆ.



ಶೀತಲ್ ತನ್ನಿಬ್ಬರು ಮಕ್ಕಳೊಂದಿಗೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಶವಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿವೆ ಎಂದು ಸಬ್ ಇನ್ಸ್‍ಪೆಕ್ಟರ್ ಭಡೇನಿಯಾ ಹೇಳಿದ್ದಾರೆ.ಶೀತಲ್ ಸಹೋದರ ಅಮರ್‍ಸಿಂಗ್ ನೀಡಿರುವ ದೂರಿನ ಅನ್ವಯ ಆಕೆಯ ಪತಿಯ ಪತಿ ದಯಾರಾಮ್ ಹಾಗೂ ಸಂಬಂಧಿಕರಾದ ನರಸಿಂಹ ಮತ್ತು ಶಾರದಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin