ಗೆಲುವಿನತ್ತ ಇರಾನ್ ಅಧ್ಯಕ್ಷ ಹಸನ್ ರೌಹನಿ

ಈ ಸುದ್ದಿಯನ್ನು ಶೇರ್ ಮಾಡಿ

Iran--01

ಟೆಹ್ರಾನ್, ಮೇ 20-ಇರಾನ್ ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಅಧ್ಯಕ್ಷ ಹಸನ್ ರೌಹನಿ ಮುನ್ನಡೆ ಸಾಧಿಸಿದ್ದಾರೆ. ಈವರೆಗೆ 25.9 ದಶಲಕ್ಷ ಮತಗಳು ಎಣಿಕೆಯಾಗಿದ್ದು, ರೌಹನಿ 14.6 ದಶಲಕ್ಷ ಮತಗಳನ್ನು ಪಡೆದು ಗೆಲುವಿನತ್ತ ದಾಪಗಾಲು ಹಾಕುತ್ತಿದ್ದಾರೆ ಎಂದು ಚುನಾವಣಾ ಸಮಿತಿ ಮುಖ್ಯಸ್ಥ ಅಲಿ ಅಸ್ಗರ್ ಅಹಮದಿ ಹೇಳಿದ್ದಾರೆ. ಹಸನ್‍ರ ಪ್ರತಿಸ್ಪರ್ಧಿ ಇಬ್ರಾಹಿಂ ರೈಸಿ 10.1 ದಶಲಕ್ಷ ಮತಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ಶೇಕಡ 40ರಷ್ಟು ಮತ ಎಣಿಕೆ ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin