ನೆಲಬಾಂಬ್ ಸ್ಫೋಟಗೊಂಡು ಒಂದೇ ಕುಟುಂಬದ 11 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

kabul
ಕಾಬೂಲ್, ಮೇ 20-ನೆಲಬಾಂಬ್ ಸ್ಫೋಟಗೊಂಡು ಮಕ್ಕಳು, ಮಹಿಳೆಯರೂ ಸೇರಿದಂತೆ ಒಂದೇ ಕುಟುಂಬದ 11 ಮಂದಿ ಸಾವಿಗೀಡಾದ ಘಟನೆ ಹಿಂಸಾಚಾರಪೀಡಿತ ಆಫ್ಘಾನಿಸ್ತಾನದ ಲೋಗಾರ್ ಪ್ರಾಂತ್ಯದ ಆಘಾ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ನೆಲಬಾಂಬ್ ಸ್ಪರ್ಶಿಸಿದ ಕೂಡಲೇ ಭಾರೀ ಆಸ್ಫೋಟ ಸಂಭವಿಸಿತು. ಈ ಕೃತ್ಯದಲ್ಲಿ ಐವರು ಮಕ್ಕಳು, ಐವರು ಮಹಿಳೆಯರು ಹಾಗೂ ಓರ್ವ ವೃದ್ಧ ಮೃತಪಟ್ಟರೆಂದು ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರಿ ಪಡೆಗಳ ವಿರುದ್ಧ ತಾಲಿಬಾನ್ ಉಗ್ರರು ಇಂಥ ನೆಲಬಾಂಬ್‍ಗಳನ್ನು ಬಳಸುತ್ತಾರೆ. ಆದರೆ, ಅಮಾಯಕರು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಲೋಗಾರ್ ಗೌರ್ನರ್ ವಕ್ತಾರ ಸಲೀಂ ಸಾಲಿಹ್ ಆತಂಕ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin