ಬೆಂಗಳೂರನ್ನು ಹಸಿರೀಕರಣಗೊಳಿಸುವ ಉದ್ದೇಶದ ಗ್ರೀನ್ ಆ್ಯಪ್ ಬಗ್ಗೆ ಮಾಹಿತಿ ನೀಡಿದ ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

BBMP-Green

ಬೆಂಗಳೂರು, ಮೇ 20- ನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ ಬಿಡುಗಡೆಯಾಗಲಿರುವ ಬಿಬಿಎಂಪಿ ಗ್ರೀನ್ ಆ್ಯಪ್ ಬಗ್ಗೆ ಮೇಯರ್ ಜಿ.ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ಮಾಹಿತಿ ನೀಡಿದರು.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 10 ಲಕ್ಷ ಸಸಿ ನೆಡಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕೆಂಪಾಪುರ, ಅಟ್ಟೂರು , ಸುಮನಹಳ್ಳಿ, ಜ್ಞಾನಭಾರತಿ ಹಾಗೂ ಹೆಸರುಘಟ್ಟದಲ್ಲಿ ಅವಶ್ಯಕತೆ ಇರುವಷ್ಟು ಗಿಡಗಳನ್ನು ಬೆಳೆಸಲಾಗಿದೆ ಎಂದು ಹೇಳಿದರು.ಹೊಂಗೆ, ಮಹಾಘನಿ, ಕಾಡು ಬಾದಾಮಿ, ನೇರಳೆ, ನೆಲ್ಲಿ , ಹೂಳೆದಾಸವಾಳ, ಬೇವು, ಚೆರ್ರಿ, ಸಂಪಿಗೆ ಸೇರಿದಂತೆ 16 ಪ್ರಬೇಧಗಳ ಗಿಡಗಳನ್ನು ಬೆಳೆಸಲಾಗಿದೆ. ಈ ಸಸಿಗಳನ್ನು ಸೂಕ್ತ ಸ್ಥಳಗಳಲ್ಲಿ ಬೆಳೆಸಬೇಕೆಂಬ ಬಗ್ಗೆ ಗ್ರೀನ್ ಆ್ಯಪ್‍ನಲ್ಲಿ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರು ಬಿಬಿಎಂಪಿ ಗ್ರೀನ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ನೋಂದಣಿ ಮಾಡಿಸಿ ಎಷ್ಟು ಸಸಿಬೇಕು, ವಾರ್ಡ್ ಯಾವುದು, ಎಲ್ಲಿ ಸಸಿ ನೆಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದರೆ ಅರಣ್ಯ ವಿಭಾಗದ ಸಿಬ್ಬಂದಿ ಮನೆ ಬಾಗಿಲಿಗೆ ಸಸಿ ತಂದು ಕೊಡುತ್ತಾರೆ ಎಂದು ತಿಳಿಸಿದರು.

ಇಂತಹ ಮಹತ್ವಾಕಾಂಕ್ಷೆಯ ಬಿಬಿಎಂಪಿ ಗ್ರೀನ್ ಆಪ್‍ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಲೋಕಾರ್ಪಣೆ ಮಾಡಲಿದ್ದಾರೆ. ಸೋಮವಾರದಿಂದ ಜನರು ಗ್ರೀನ್ ಆಪ್ ಬಳಕೆ ಮಾಡಿಕೊಂಡು ಕೆರೆ ಅಂಗಳ, ಖಾಲಿ ಜಾಗದಲ್ಲಿ ಗಿಡ ನೆಡಬಹುದಾಗಿದೆ.   ಇದರ ಜತೆಗೆ ಬಿಬಿಎಂಪಿ ಕೂಡ ಖಾಲಿ ಜಾಗ, ಕೆರೆ ಪ್ರದೇಶ ಮತ್ತಿತೆರೆಡೆ ಗಿಡ-ಮರ ಬೆಳೆಸುವ ಮೂಲಕ ಉದ್ಯಾನನಗರಿ ಹೆಸರಿಗೆ ಅಪಖ್ಯಾತಿ ಬರದಂತೆ ನೋಡಿಕೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin