ಆಸ್ತಿ ತೆರಿಗೆ ಘೋಷಿಸಿಲ್ಲ 1856 ಐಎಎಸ್ ಅಧಿಕಾರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

IAS--Officers

ನವದೆಹಲಿ,ಮೇ 21- ಕರ್ನಾಟಕದ 82 ಐಎಎಸ್ ಅಧಿಕಾರಿಗಳು ಸೇರಿದಂತೆ ದೇಶದಲ್ಲಿ ಸುಮಾರು 1856 ಐಎಎಸ್ ಅಧಿಕಾರಿಗಳು ತಮ್ಮ ಸ್ಥಿರಾಸ್ತಿಗಳ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ..!!  ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಎಲ್ಲ ಅಧಿಕಾರಿಗಳು ಸ್ಥಿರ ಸ್ವತ್ತುಗಳ ವಿವರಗಳನ್ನು(ಐಪಿಆರ್) ಸಲ್ಲಿಸುವುದು ಕಡ್ಡಾಯ.   ಪ್ರತಿ ವರ್ಷ ಜನವರಿಯೊಳಗೆ ಇವರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕು. ಆದರೆ ಈ ವರ್ಷದ ನಿಗದಿತ ಕಾಲ ಚೌಕಟ್ಟಿನೊಳಗೆ 1856 ಐಎಎಸ್ ಅಧಿಕಾರಿಗಳು ವಿವರ ಸಲ್ಲಿಸಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಂಕಿಅಂಶ ತಿಳಿಸಿದೆ.ಆಸ್ತಿ ವಿವರ ಸಲ್ಲಿಸದ ಐಎಎಸ್ ಅಧಿಕಾರಿಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ(255).   ರಾಜಸ್ಥಾನ(153),ಮಧ್ಯಪ್ರದೇಶ(118), ಪಶ್ಚಿಮ ಬಂಗಾಳ(109) ಹಾಗೂ ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ- ಕೇಂದ್ರಾಡಳಿತ ಪ್ರದೇಶ(204)ಗಳ ಐಎಎಸ್ ಅಧಿಕಾರಿಗಳು ನಂತರದ ಸ್ಥಾನದಲ್ಲಿದ್ದಾರೆ.   ಆಸ್ತಿ ವಿವರ ಸಲ್ಲಿಸದ ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಖ್ಯೆ 86.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin