ಜಿ.ಎಂ.ಸಿದ್ದೇಶ್ವರ್ ಮನೆ, ಉದ್ಯಮದ ಮೇಲೆ ಐಟಿ ದಾಳಿ, ತೆರಿಗೆ ವಂಚನೆಯ ದಾಖಲೆ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Siddeshwar--01

ಬೆಂಗಳೂರು, ಮೇ 21- ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಒಡೆತನದ ಉದ್ಯಮಗಳ ಮೇಲಿನ ಐಟಿ ದಾಳಿ ವೇಳೆ ದಾಖಲೆ ಇಲ್ಲದೆ 15 ಲಕ್ಷ ರೂ. ನಗದು, ಅಪಾರ ಪ್ರಮಾಣದ ಆದಾಯ ತೆರಿಗೆ ವಂಚನೆ ಮಾಡಿರುವ ಕುರಿತು ಮಾಹಿತಿಯುಳ್ಳ ದಾಖಲೆಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಸಿದ್ದೇಶ್ವರ್ ಒಡೆತನದ ಮನೆ, ಅಡಿಕೆ ಮಂಡಿ, ಬ್ಯಾಂಕ್, ಫ್ಯಾಕ್ಟರಿ ಸೇರಿದಂತೆ 130 ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಸಿದ್ದೇಶ್ವರ್ ಅವರ ಸ್ವಗ್ರಾಮ ಭೀಮಸಮುದ್ರದಲ್ಲಿ ಸತತ ನಾಲ್ಕು ದಿನಗಳಿಂದ ಕಡತ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು ರಾತ್ರಿಯಿಡೀ ಕಡತ ಪರಿಶೀಲಿಸಿ ಇಂದು ಬೆಳಗ್ಗೆ ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.ದಾಳಿ ಕಾರ್ಯಾಚರಣೆ ಮುಗಿಸಿ ಭೀಮಸಮುದ್ರದಿಂದ ಹೊರಟ ಐಟಿ ಅಧಿಕಾರಿಗಳ ತಂಡ ದಾಖಲೆ ಇಲ್ಲದ 15 ಲಕ್ಷ ರೂ. ನಗದು, ಅಪಾರ ಪ್ರಮಾಣದ ಆದಾಯ ತೆರಿಗೆ ವಂಚನೆ ಮಾಡಿರುವ ಕುರಿತು ಮಾಹಿತಿಯುಳ್ಳ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin