ನೂತನ ದಾಖಲೆ ಬರೆಯಲಿರುವ ಮಹಿ

ಈ ಸುದ್ದಿಯನ್ನು ಶೇರ್ ಮಾಡಿ

Dhonin--01

ಜಯಪ್ರಕಾಶ್

ಇಡೀ ವಿಶ್ವ ಕಂಡ ಶ್ರೇಷ್ಠ ನಾಯಕ , ವಿಕೆಟ್ ಕೀಪರ್‍ಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಪುಣೆ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಹೊರಟಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿರುವ ಮಹಿ ಐಪಿಎಲ್‍ನಲ್ಲೂ ತನ್ನದೇ ಆದ ವಿಕ್ರಮವನ್ನು ಸಾಧಿಸುವ ಮೂಲಕ 8 ವರ್ಷಗಳ ಕಾಲ ಚೆನ್ನೈಸೂಪರ್ ಕಿಂಗ್ಸ್ ತಂಡದ ಖಾಯಂ ನಾಯಕನಾಗಿ ಆಡಿ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದರು.

2013ರ ಐಪಿಎಲ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ , ಮ್ಯಾಕ್ ಫಿಕ್ಸಿಂಗ್‍ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2016 ಹಾಗೂ 2017 ವರ್ಷದ ಐಪಿಎಲ್‍ನಿಂದ ನಿಷೇಧ ಹೇರಿದ ನಂತರ ಕಳೆದ ಬಾರಿ ಐಪಿಎಲ್‍ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದ ನಾಯಕನಾಗಿ ಕಳಪೆ ಪ್ರದರ್ಶನ ನೀಡಿದ್ದರು ಈ ಬಾರಿಯ ಐಪಿಎಲ್ 10ರಲ್ಲಿ ತಂಡವನ್ನು ಫೈನಲ್‍ಗೇರಿಸಿರುವಲ್ಲಿ ನಾಯಕ ಸ್ಟೀವ್‍ಸ್ಮಿತ್‍ಗಿಂತ ಮಹೇಂದ್ರ ಸಿಂಗ್ ಧೋನಿಯವರ ಪಾತ್ರವೇ ಮುಖ್ಯ.  ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ 5 ಭರ್ಜರಿ ಸಿಕ್ಸರ್‍ಗಳಿಂದ ನೆರವಿನಿಂದ 26 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಫೈನಲ್‍ಗೇರಿಸಿದ ರೀತಿಯಂತೂ ಮಹಿ ಬ್ಯಾಟಿಂಗ್ ವೈಭವಕ್ಕೆ ಹಿಡಿದ ಕನ್ನಡಿಯಂತಿದೆ.ಐಪಿಎಲ್‍ನ ಫೈನಲ್‍ನಲ್ಲಿ ದಾಖಲೆ:

ಐಪಿಎಲ್‍ನ ಮೊದಲ ಋತುವಿನಲ್ಲೇ ತಂಡವನ್ನು ಫೈನಲ್‍ಗೇರಿಸುವಂತೆ ಮಾಡಿದ ಸಿಎಸ್‍ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡ ರನ್ನರ್ ಅಪ್ ಆದರೆ, 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 22 ರನ್‍ಗಳ ಮೂಲಕ ಗೆಲ್ಲುವ ಮೂಲಕ ತಂಡಕ್ಕೆ ಐಪಿಎಲ್ ಮುಕುಟವನ್ನು ತಂದುಕೊಟ್ಟರು.  2011ರಲ್ಲಿ ಚೆನ್ನೈನಲ್ಲಿ ಆರ್‍ಸಿಬಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಬಳಗವು 58 ರನ್‍ಗಳಿಂದ ಗೆಲ್ಲುವ ಮೂಲಕ ಚಾಂಪಿಯನ್ಸ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರವಾಗುವಲ್ಲೂ ಕೂಡ ಧೋನಿಯ ಸಾಧನೆ ಅಮೋಘ.

ನಂತರ 2012 ಮತ್ತು 2013ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್‍ವರೆಗೆ ಕೊಂಡೊಯ್ಯುವಲ್ಲಿ ಧೋನಿ ಸಕ್ಸಸ್ ಆದರೂ ಕೂಡ ಫೈನಲ್ಸ್‍ನಲ್ಲಿ ಕ್ರಮವಾಗಿ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ 5 ವಿಕೆಟ್ ಹಾಗೂ 23 ರನ್‍ಗಳಿಂದ ಸೋತರೂ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.

2015ರಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಉತ್ತಮ ನಾಯಕತ್ವದಿಂದ ಸಿಎಸ್‍ಕೆ ತಂಡವನ್ನು ಫೈನಗೇರೆಸಿತ್ತಾದರೂ ಮುಂಬೈ ತಂಡ ನೀಡಿದ 202 ರನ್‍ಗಳ ಗುರಿ ಬೆನ್ನಟ್ಟಿ 161 ರನ್‍ಗಳಿಗೆ ಸರ್ವಪತನ ಕಂಡು 41 ರನ್‍ಗಳ ಮೂಲಕ ಸೋಲು ಕಂಡಿತ್ತು.  ಈಗ 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸಿಎಸ್‍ಕೆ ತಂಡ ಸೋತಿದ್ದನ್ನು ಮರೆತು ಸ್ಮಿತ್ ನಾಯಕತ್ವದ ಆರ್‍ಪಿಎಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಗೆಲ್ಲಿಸಬೇಕೆಂಬ ಕಂಕಣವನ್ನು ಧೋನಿ ತೊಟ್ಟಿದ್ದು ಲೀಗ್‍ನಲ್ಲಿ ಮುಂಬೈ ವಿರುದ್ಧ ಆ ತಂಡದ ಸಾಮಥ್ರ್ಯವನ್ನು ಗಮನಿಸಿದರೆ ಆರ್‍ಪಿಎಸ್ ಐಪಿಎಲ್ 10ರ ಮುಕುಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಂಶಯವಿಲ್ಲ.

ಆ ಮೂಲಕ ಐಪಿಎಲ್‍ನಲ್ಲಿ 3 ಬಾರಿ ಕಪ್ ಗೆದ್ದ ತಂಡದಲ್ಲಿ ಪಾಲ್ಗೊಂಡ ಮೊದಲ ಆಟಗಾರ ಎಂಬ ಕೀರ್ತಿಗೂ ಮಹಿ ಭಾಜನರಾಗಲಿದ್ದಾರೆ.  ಮಹೀಂದ್ರ ಸಿಂಗ್ ಧೋನಿಯನ್ನು ಬಿಟ್ಟರೆ ಸುರೇಶ್ ರೈನಾ 6 ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಹಾಗೂ ಅಬ್ಲೆ ಮಾರ್ಕಲ್, ಸುಬ್ರಮಣಿ ಬದ್ರಿನಾಥ್, ರವಿಚಂದ್ರನ್ ಅಶ್ವಿನ್ ಅವರು 5 ಬಾರಿ ಐಪಿಎಲ್ ಫೈನಲ್ಸ್‍ನಲ್ಲಿ ಕಣಕ್ಕಿಳಿದಿದ್ದರು.  ಈ ಎಲ್ಲಾ ಆಟಗಾರರು ಕೂಡ ಧೋನಿ ನಾಯಕತ್ವ ವಹಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೆಂಬುದು ಗಮನಾರ್ಹ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin