ರಾಷ್ಟ್ರದ್ರೋಹ ಆರೋಪ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಮನೆ ಮೇಲೆ ಪೊಲೀಸ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Bangadesh

ಢಾಕಾ, ಮೇ 21-ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ವಿರೋಧಪಕ್ಷದ ನಾಯಕಿ ಖಾಲಿದಾ ಜಿಯಾ ಅವರ ಕಚೇರಿ ಮೇಲೆ ದಾಳಿ ಮಾಡಿದ ಪೊಲೀಸರು, ರಾಷ್ಟ್ರವಿರೋಧಿ ದಾಖಲೆಪತ್ರಗಳಿಗಾಗಿ ತೀವ್ರ ಶೋಧ ನಡೆಸಿದರು. ಪೊಲೀಸರ ಈ ಕ್ರಮವನ್ನು ಖಂಡಿಸಿ ಜಿಯಾ ಬೆಂಬಲಿಗರು ಭಾರೀ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.  ಗುಲ್ಷನ್ ಪ್ರದೇಶದಲ್ಲಿರುವ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‍ಪಿ) ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು ಎರಡು ತಾಸುಗಳ ಕಾಲ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳಿಗಾಗಿ ತಡಕಾಡಿದರು. ಆದರೆ ರಾಷ್ಟ್ರವಿರೋಧಿ ಕೃತ್ಯಗಳನ್ನು ಸಾಬೀತು ಮಾಡುವ ಯಾವುದೇ ಸಾಕ್ಷ್ಯಾಧಾರಗಳೂ ಲಭಿಸದೇ ಬರಿಗೈಯಲ್ಲಿ ಹಿಂದಿರುಗಿದರು.



ಜಿಯಾ ವಿರುದ್ಧ ರಾಷ್ಟ್ರದ್ರೋಹ ಆರೋಪ ಹೊರಿಸಿರುವ ಅನಾಮಧೇಯ ವ್ಯಕ್ತಿಯ ಡೈರಿಯೊಂದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಯಾವುದೇ ವಾರೆಂಟ್ ಇಲ್ಲದೇ ದಾಳಿ ನಡೆಸಿರುವುದಾಗಿ ಬಿಎನ್‍ಪಿ ಆರೋಪಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin