1200 ಕೋಟಿ ಬೃಹತ್ ಕಾರ್ಯಕ್ರಮ ಕಮಿಷನ್ ದಂಧೆಯದ್ದು : ಡಾ.ಕೆ.ಅನ್ನದಾನಿ ಅರೋಪ

ಈ ಸುದ್ದಿಯನ್ನು ಶೇರ್ ಮಾಡಿ

Annadani--01

ಮಳವಳ್ಳಿ, ಮೇ 21- ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 1200 ಕೋಟಿಯ ಬೃಹತ್ ಕಾರ್ಯಕ್ರಮ ಕಮಿಷನ್ ದಂಧೆಯದ್ದು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಪಟ್ಟಣದ ರೈತ ಸಮುದಾಯ ಭವನದಲ್ಲಿ ತಾಲೂಕು ಜಾತ್ಯಾತೀತ ಜನತಾದಳದ ವತಿಯಿಂದ ಆಯೋಜಿಸಿದ್ದ ಬೂತ್ ಕಮಿಟಿ ರಚನೆಯ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಪೂರಿಗಾಲಿಯ 593 ಕೋಟಿ ಯೋಜನೆಯ ಹನಿ ನೀರಾವರಿ ಯೋಜನೆ ಕೇವಲ ನೆಪ ಮಾತ್ರ ಎಂದು ನರೇಂದ್ರಸ್ವಾಮಿ ಕುತಂತ್ರ ರಾಜಕಾರಿಣಿ ಎಂದರು.ಹನಿ ನೀರಾವರಿ ಯೋಜನೆ ಜಾರಿಗೆ ಬರುವುದು ಸಾಧ್ಯವಿಲ್ಲ. ಏಕೆಂದರೆ ಇದು ಕಾವೇರಿ ಮಧ್ಯಂತರ ತೀರ್ಪಿನಲ್ಲಿ ಅನುಮತಿಯಿಲ್ಲ. ಆದ್ದರಿಂದ ಈ ಯೋಜನೆ ಕೇವಲ ಕಮಿಷನ್ ದಂಧೆಗಾಗಿ ಮಾಡಿಕೊಂಡು ಯೋಜನೆಯಾಗಿದೆ ಎಂದು ಅರೋಪಿಸಿದ ಅವರು, ಮಳವಳ್ಳಿ ದೊಡ್ಡಕೆರೆ ಸೇರಿದಂತೆ ತಾಲೂಕಿನಾದ್ಯಂತ ಹಲವು ಕೆರೆಗಳ ಹೂಳೆತ್ತುವ ಯೋಜನೆಯೂ ಸಹ ಕಮಿಷನ್ ದಂಧೆಗೆ ಸೀಮಿತವಾಗಿದೆ ಎಂದರು.  ಸ್ಥಳಿಯ ಶಾಸಕರ ಅಬ್ಬರಕ್ಕೆ ಕಡಿವಾಣ ಹಾಕಬೇಕಿದೆ. ಇಂತಹವರಿಗೆ ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. 2018ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ ಪಕ್ಷದ ಸಂಘಟನೆಗೆ ಹೆಚ್ಚು ನೀಡುವಂತೆ ಕರೆ ನೀಡಿದರು.

ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ,ಜೆಡಿಎಸ್ ಪಕ್ಷಕ್ಕೆ ಈ ಕ್ಷೇತ್ರ ಭದ್ರ ಬೂನಾದಿಯಾಗಿದೆ. ಇಲ್ಲಿ ರಾಜಕೀಯ ಬಾಷಣ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ನಮ್ಮ ನಾಯಕ ಹೆಚ್.ಡಿ.ದೇವೆಗೌಡರನ್ನು ಸಂಸದರನ್ನಾಗಿ ಮಾಡಿ ಪುನರ್‍ಜನ್ಮ ನೀಡಿದ ಕ್ಷೇತ್ರವಿದು ಎಂದರು.  ಶಾಸಕ ನರೇಂದ್ರಸ್ವಾಮಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಅವರು, ನಮ್ಮ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸುವ ಹುನ್ನಾರ ಸಲ್ಲದು. ಇದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಅಗಿರುವ ಚುನಾವಣೆಯಲ್ಲಿ ಸೋಲಿನ ಅನುಭವದಿಂದ ಕಾರ್ಯಕರ್ತರು ಬಹಳಷ್ಟು ವಿಚಲಿತರಾಗಿದ್ದಾರೆ. ಕ್ಷೇತ್ರದಲ್ಲಿನ ಕಾರ್ಯಕರ್ತರ ಸಮಸ್ಯೆ ಅರಿಯಬೇಕು, ವೀಕ್ಷಕ ಶ್ರೀಕಂಠೇಗೌಡರು, ಪುಟ್ಟರಾಜುರವರು ಮುಕ್ತ ಬಹಿರಂಗ ಸಭೆ ಕರೆದು ಕಾರ್ಯಕರ್ತರಲ್ಲಿರುವ ಗೊಂದಲವನ್ನು ಬಹಿರಂಗವಾಗಿ ಚರ್ಚಿಸಿ ಈ ಭಿನ್ನಾಭಿಪ್ರಾಯಗಳನ್ನು ಚರ್ಚೆ ನಡೆಸಿ, ನ್ಯಾಯ ಒದಗಿಸುವ ಮೂಲಕ ಪಕ್ಷದ ಗೆಲುವಿಗೆ ಮುನ್ನುಡಿಯಾಗುವಂತೆ ಮನವಿ ಮಾಡಿದರು.

ಜಿಲ್ಲಾ ಅಧ್ಯಕ್ಷ ಪಿ.ರಮೇಶ್,ಜಿಲ್ಲಾ ವೀಕ್ಷಕ ಪ್ರದೀಪ್‍ಕುಮಾರ್, ತಾಲೂಕು ಆಧ್ಯಕ್ಷ ಬಿ.ರವಿ, ಯುವ ಘಟಕದ ಅಧ್ಯಕ್ಷ ಟಿ.ನಂದಕುಮಾರ್, ಮುಖಂಡರಾದ ವೀರೆಗೌಡ, ರಾಜಣ್ಣ, ಪ್ರಕಾಶ್, ದೊಡ್ಡಯ್ಯ, ಶಶಿಧರ,ಪುಟ್ಟಬುದ್ದಿ, ಜಯರಾಮು, ಜಾವೀದ್‍ಪಾಷ, ದೊಡ್ಡೆಗೌಡ, ಕಂಭರಾಜು, ಆನಂದ್, ಪುರಸಭೆ ಸದಸ್ಯರಾದ ರಾಜಣ್ಣ, ಸವಿತರಾಜು ಸೇರಿದಂತೆ ನೂರಾರು ಮುಖಂಡರು, ತಾಪಂ, ಗ್ರಾಪಂ, ಜಿಪಂ ಸದಸ್ಯರು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin