ಇಸ್ರೇಲ್‍ ಜೊತೆ 30 ದಶಲಕ್ಷ ಡಾಲರ್ ಕ್ಷಿಪಣಿ ವ್ಯವಹಾರ ಕುದುರಿಸಿಕೊಂಡ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Isrel--01

ಟೆಲ್ ಅವಿವ್, ಮೇ 22-ಭಾರತೀಯ ವಾಯು ಪಡೆಯ ನಾಲ್ಕು ಯುದ್ಧ ನೌಕೆಗಳಿಗೆ ವಾಯು ಮತ್ತು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಪೂರೈಸಲು ಇಸ್ರೇಲ್ ಏರೋಸ್ಪೆಸ್ ಇಂಡಸ್ಟ್ರೀಸ್ 630 ದಶಲಕ್ಷ ಡಾಲರ್‍ಗಳ ಹೆಚ್ಚುವರಿ ವ್ಯವಹಾರ ಕುದುರಿಸಿಕೊಂಡಿದೆ.  ಭಾರತದ ಮೇಕ್ ಇನ್ ಇಂಡಿಯಾ ನೀತಿಯ ಯೋಜನೆಯ ಭಾಗದ ಮುಖ್ಯ ಗುತ್ತಿಗೆ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನೊಂದಿಗೆ ಈ ಕರಾರಿಗೆ ಸಮ್ಮತಿ ನೀಡಲಾಗಿದೆ.

ಭಾರತೀಯ ನೌಕಾ ಪಡೆಯ ಸಮರ ನಾವೆಯ ಮೇಲೆ ಕಳೆದ ವಾರ ಇಸ್ರೇಲ್‍ನ ಬರಾಕ್-9 ದೀರ್ಘ ಶ್ರೇಣಿಯ ಭೂಮಿಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿತ್ತು. ಈ ಪ್ರಯೋಗದ ಸಂದರ್ಭದಲ್ಲಿ ವಾಯು ಪ್ರದೇಶದಿಂದ ಒಡ್ಡಲಾದ ಅಣಕು ವೈರಿ ಆಕ್ರಮಣವನ್ನು ಈ ಕ್ಷಿಪಣಿ ಗುರುತಿಸಿ ಆಗಸದಲ್ಲೇ ನಿಖರವಾಗಿ ಹೊಡೆದುರುಳಿತು.
.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin