ಐಪಿಎಲ್ ಮುಗಿಯಿತು, ಈಗ ಎಲ್ಲರ ಚಿತ್ತ ಚಾಂಪಿಯನ್ಸ್ ಟ್ರೋಫಿಯತ್ತ ..?

ಈ ಸುದ್ದಿಯನ್ನು ಶೇರ್ ಮಾಡಿ

kohli-dhoni

ಬೆಂಗಳೂರು, ಮೇ 19- ಮುತ್ತಿನ ನಗರಿ ಹೈದ್ರಾಬಾದ್‍ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುವ ಮೂಲಕ ಐಪಿಎಲ್ 10ಕ್ಕೆ ಇತಿಶ್ರೀ ಹಾಡಿದ್ದು ಈಗ ಕ್ರೀಡಾಭಿಮಾನಿಗಳ ಚಿತ್ತ ಚಾಂಪಿಯನ್ಸ್ ಲೀಗ್‍ನತ್ತ ಹರಿದಿದೆ.  ಒಂದೂವರೆ ತಿಂಗಳವರೆಗೂ ಬೇರೆ ಬೇರೆ ತಂಡಗಳಲ್ಲಿ ಕಾಣಿಸಿಕೊಂಡು ಶತ್ರುಗಳಂತೆ ಬಿಂಬಿಸಿಕೊಂಡಿದ್ದ ಆಟಗಾರರೆಲ್ಲರೂ ಈಗ ತಮ್ಮ ದೇಶಕ್ಕಾಗಿ ಆಡಲು ಸಜ್ಜಾಗಿದ್ದಾರೆ.ಮಿಂಚುವರೇ ಸ್ಟಾರ್ ಆಟಗಾರರು?

ಐಪಿಎಲ್‍ನಲ್ಲಿ ಸ್ಟಾರ್ ಬ್ಯಾಟ್ಸ್ ಮನ್‍ಗಳೆಲ್ಲರೂ ಪ್ಲಾಫ್ ಶೋವನ್ನು ಪ್ರದರ್ಶಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೆ ತಮ್ಮ ಎಂದಿನ ಲಯವನ್ನು ಕಂಡುಕೊಳ್ಳುವ ಮೂಲಕ ರನ್‍ಗಳ ಸುರಿಮಳೆಯನ್ನೇ ಸುರಿಸಲು ಸಜ್ಜಾಗುತ್ತಾರೆಯೇ ಎಂದು ಹಲವರಲ್ಲಿ ಪ್ರಶ್ನೆ ಕೂಡ ಮೂಡಿದೆ.  ಮುಖ್ಯವಾಗಿ ಆರ್‍ಸಿಬಿ ತಂಡದಲ್ಲಿದ್ದ ಸ್ಟಾರ್ ಬ್ಯಾಟ್ಸಮನ್ ಗಳಾದ ವಿರಾಟ್ ಕೊಹ್ಲಿ , ಕ್ರಿಸ್‍ಗೇಲ್, ಎಬಿಡಿವಿಲಿಯರ್ಸ್ ರಿಂದ ಎಂದಿನ ಆಟವು ಮೂಡಿಬರುವುದೇ ಎಂದು ಕ್ರಿಕೆಟ್ ಪ್ರಿಯರು ಕಾದು ನೋಡುತ್ತಿದ್ದಾರೆ. ಇವರೇ ಅಲ್ಲದೆ ಐಪಿಎಲ್ 10ರಲ್ಲಿ ತಮ್ಮ ಬ್ಯಾಟಿಂಗ್‍ನ ಮೊನಚನ್ನು ಪ್ರದರ್ಶಿಸಿರುವ ಡೇವಿಡ್ ವಾರ್ನರ್ (641 ರನ್), ಶಿಖರ್ ಧವನ್ (479 ರನ್), ಸ್ಟಿವನ್ ಸ್ಮಿತ್ (472 ರನ್), ಆಶೀಮ್ ಆಮ್ಲಾ (420 ರನ್ ) ಚಾಂಪಿಯನ್ಸ್ ಟ್ರೋಫಿಯಲ್ಲೂ ರನ್‍ಗಳ ಹೊಳೆ ಹರಿಸಲಿದ್ದಾರೆ ಎಂದು ಕಾದು ನೋಡುತ್ತಿದ್ದಾರೆ.

 

ಐಪಿಎಲ್‍ಗಿಂತ ತೀರಾ ಭಿನ್ನ:
ಚಾಂಪಿಯನ್ಸ್ ಟ್ರೋಫಿಯು ಐಪಿಎಲ್‍ಗಿಂತ ತೀರಾ ವಿಭಿನ್ನವಾಗಿದೆ. ಕಳೆದ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು 20-20 ಮಾದರಿಯಲ್ಲಿ ನಡೆಸಲಾಗಿತ್ತಾದರೂ ಈ ಬಾರಿ 50 ಓವರ್‍ಗಳ ನಿಯಮವನ್ನೇ ಅನುಸರಿಸುವುದರಿಂದ ಸರಣಿಯು ಹಿಂದಿನ ಚಾರ್ಮ್ ಅನ್ನೇ ಉಳಿಸಿ ಕೊಂಡಿದೆ.


 

ಚಾಂಪಿಯನ್ಸ್ ಪಟ್ಟ ಉಳಿಸಿಕೊಳ್ಳುವುದೇ ಭಾರತ?
ಪ್ರಸಕ್ತ ಚಾಂಪಿಯನ್ಸ್ ಆಗಿರುವ ಭಾರತ ತಂಡವು ಈ ಬಾರಿಯು ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವುದೇ ಎಂಬ ಅನುಮಾನ ಕೂಡ ದಟ್ಟವಾಗಿ ಮೂಡಿದೆ.
2013ರ ಫೈನಲ್ ಪಂದ್ಯದಲ್ಲಿ ರವಿಂದ್ರಜಡೇಜಾರ ಅದ್ಭುತ ಬೌಲಿಂಗ್ ಪ್ರದರ್ಶನ ಹಾಗೂ ಶಿಖರ್ ಧವನ್‍ರ ಬ್ಯಾಟಿಂಗ್ ವೈಭವ ಮತ್ತು ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವದ ಚಾಕಚಕ್ಯತೆಯಿಂದ ಇಂಗ್ಲೆಂಡ್ ವಿರುದ್ಧ 5 ರನ್‍ಗಳಿಂದ ಗೆಲುವು ಸಾಧಿಸಿತ್ತು.

 

ವಿರಾಟ್‍ಗೆ ಅಗ್ನಿಪರೀಕ್ಷೆ:
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಯಾದ ನಂತರ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡು ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿರುವ ವಿರಾಟ್ ಕೊಹ್ಲಿಗೆ ಚಾಂಪಿಯನ್ಸ್ ಟ್ರೋಫಿ ಅಗ್ನಿಪರೀಕ್ಷೆಯಾಗಿದೆ. ಐಪಿಎಲ್ 10ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಸಾರಥ್ಯ ವಹಿಸಿದ್ದ ಕೊಹ್ಲಿ ತಂಡವನ್ನು ಪ್ಲೇಆಫ್‍ಗೇರಿಸುವಲ್ಲಿ ವಿಫಲರಾಗಿರುವುದು ಕೊಹ್ಲಿಗೆ ಚಾಂಪಿಯನ್ಸ್ ಟ್ರೋಫಿ ಕಬ್ಬಿಣದ ಕಡಲೆಯಂತಾಗಿದೆ.

 

ಕಪ್ ಗೆಲ್ಲುವ ಫೇವರೇಟ್ ತಂಡಗಳು:
ಜೂನ್ 1 ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವಲ್ಲಿ ಪ್ರಸಕ್ತ ಚಾಂಪಿಯನ್ಸ್ ಭಾರತವೇ ಹಾಟ್‍ಫೇವರೇಟ್ ಆಗಿದೆ. ನಂತರದ ಸ್ಥಾನಗಳನ್ನು ಪಾಕಿಸ್ಥಾನ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳಿವೆ.  ಒಟ್ಟಾರೆ ಐಪಿಎಲ್ ಮಹಾಯಾತ್ರೆಯಲ್ಲಿ ಒಂದೂವರೆ ತಿಂಗಳ ಕಾಲ ಮಿಂದೆದ್ದಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಜೂನ್ 1 ರಿಂದ 18ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯೂ ಭರಪೂರ ಮನರಂಜನೆಯನ್ನು ನೀಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin