ಮೇಯರ್ ಪದ್ಮಾವತಿಯವರನ್ನು ತರಾಟೆಗೆ ತೆಗೆದುಕೊಂಡ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Padmavathi--01

ಬೆಂಗಳೂರು, ಮೇ 22– ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮೊನ್ನೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇಯರ್ ಪದ್ಮಾವತಿಯವರನ್ನು ತರಾಟೆಗೆ ತೆಗೆದುಕೊಂಡರು.  ಇಂದು ಬೆಳಗ್ಗೆ ಬಿಬಿಎಂಪಿ ವತಿಯಿಂದ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಯಾಂತ್ರಿಕ ಕಸ ಗುಡಿಸುವ ಯಂತ್ರದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಪಾಲ್ಗೊಂಡಿದ್ದಾಗ ಮೇಯರ್ ಪದ್ಮಾವತಿಯವರು ಎದುರಾಗುತ್ತಿದ್ದಂತೆ ರಾಜರಾಜೇಶ್ವರಿ ನಗರದಲ್ಲಿ ನಡೆದ ಘಟನೆಯ ಗಲಾಟೆಯನ್ನು ಪ್ರಶ್ನಿಸಿದ್ದಾರೆ.ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಹಾಗೂ ಶಾಸಕ ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದೇಕೆ, ನಾನು ಭಾಗವಹಿಸಿದ ಕಾರ್ಯಕ್ರಮದಲ್ಲೇ ಗದ್ದಲ ಆಗುವುದಾದರೆ ಅದನ್ನು ತಡೆಯಲು ಏಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. ಬಹಿರಂಗ ಸಭೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಲ್ಲವೆ ಎಂದು ಪ್ರಶ್ನಿಸಿದ್ದಾರೆ.   ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದೆ. ಮೈತ್ರಿ ಪಕ್ಷದಲ್ಲಿ ಇಂತಹ ಘಟನೆ ನಡೆದರೆ ತಪ್ಪು ಸಂದೇಶ ಹೋಗುತ್ತದೆ. ಕಾಂಗ್ರೆಸ್‍ನ ವರ್ಚಸ್ಸಿಗೂ ಹಾನಿಯಾಗುತ್ತದೆ. ಬಿಬಿಎಂಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದು ಬಿಟ್ಟು ಇಂತಹ ಅವಘಡಗಳಿಗೆ ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್ ವರ್ಚಸ್ಸಿಗೆ ಹಾನಿಯಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಯವರ ಮಾತುಗಳಿಗೆ ಉತ್ತರಿಸಲು ಸಾಧ್ಯವಾಗದೆ ಕೆಲಕಾಲ ಮೇಯರ್ ಸ್ತಬ್ಧರಾದರು.  ನಂತರ ಮೇಯರ್ ಸಾವರಿಸಿಕೊಂಡು ಅಂದಿನ ಘಟನೆ ಹಿಂದಿರುವ ಕಾರಣಗಳು ಮತ್ತು ರಾಜಕೀಯ ವಿಚಾರಗಳನ್ನು ವಿವರಿಸಿ ಮುಖ್ಯಮಂತ್ರಿಯವರನ್ನು ಸಮಾಧಾನಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin