5 ವರ್ಷದ ಹೆಣ್ಣು ಮಗುವಿನ ಮೇಲೆ ಅಪ್ಪ ರೇಪ್ ಮಾಡಿದ, ಅಜ್ಜಿ ಕೊಂದು ಹಾಕಿದಳು..!

ಈ ಸುದ್ದಿಯನ್ನು ಶೇರ್ ಮಾಡಿ

Rape-Girl

ನಾಸಿಕ್, ಮೇ 22-ಐದು ವರ್ಷದ ಹೆಣ್ಣು ಮಗುವಿನ ಮೇಲೆ ತಂದೆ ಅತ್ಯಾಚಾರ ನಡೆಸಿದ ಹಾಗೂ ನಂತರ ಬಾಲಕಿಯನ್ನು ಅಜ್ಜಿ ಕೊಂದು ಹಾಕಿದ ಬರ್ಬರ ಕೃತ್ಯ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಜವುಲೇಕ್-ವಾನಿ ಗ್ರಾಮದಲ್ಲಿ ನಡೆದಿದೆ. ಈ ನೀಚ ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರಿ ತಂದೆ ಮತ್ತು ಹಂತಕಿ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.   ಸಚಿನ್ ಶಿಂಧೆ ಎಂಬಾತ ಶುಕ್ರವಾರ ರಾತ್ರಿ ತನ್ನ ಐದು ವರ್ಷದ ಪುತ್ರಿ ಮೇಲೆ ಅತ್ಯಾಚಾರ ನಡೆಸಿದ. ನಂತರ ಈ ಕೃತ್ಯ ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ ಸಚಿನ್ ತಾಯಿ ಅನುಸೂಯ ಮಗುವಿಗೆ ಉಸಿರುಗಟ್ಟಿಸಿ ಕೊಂದಳು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ದೇವದಾಸ್ ಪಾಟೀಲ್ ಹೇಳಿದ್ದಾರೆ.



ಈ ಘಟನೆ ನಡೆದಾಗ ಮಗುವಿನ ತಾಯಿ ಮನೆಯಲ್ಲಿ ಇರಲಿಲ್ಲ. ಕೊಲೆಯಾದ ಮಗುವನ್ನು ಅನುಸೂಯ ಮನೆ ಬಳಿ ಇರುವ ಶಾಲೆಯ ಕಟ್ಟಡವೊಂದರ ಹಿಂದೆ ಹೂತು ಹಾಕಿದ್ದಳು. ನಂತರ ಪೊಲೀಸರನ್ನು ಸಂಪರ್ಕಿಸಿ ತನ್ನ ಮೊಮ್ಮಗಳು ಕಾಣೆಯಾಗಿದ್ದಾಳೆ. ಆಕೆಯನ್ನು ಯಾರೋ ಅಪಹರಿಸಿ ಕೊಂದಿರಬಹುದೆಂದು ಸುಳ್ಳು ದೂರು ನೀಡಿದ್ದಳು. ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಅನುಮಾನ ಬಂದು ಅನುಸೂಯಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಸಂಗತಿ ಬಯಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin