ಜೇಟ್ಲಿ ಮಾನಹಾನಿ ಮೊಕದ್ದಮೆ : ಕೇಜ್ರಿವಾಲ್‍ಗೆ ನೋಟಿಸ್ ನೀಡಿದ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arvind-Kejriwal--01

ನವದೆಹಲಿ, ಮೇ 23-ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ.   ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಈ ಸಂಬಂಧ ಕೇಜ್ರಿವಾಲ್‍ಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಜುಲೈ 28ರಂದು ಈ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಗೊಳಿಸಲಾಗಿದೆ.



ನ್ಯಾಯಾಲಯದಲ್ಲಿ ಕಳೆದ ವಾರ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಕ್ಕಾಗಿ ಜೇಟ್ಲಿ ದೆಹಲಿ ಮುಖ್ಯಮಂತ್ರಿ ಮೇಲೆ ನಿನ್ನೆ ಹೊಸದಾಗಿ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.   ಕೇಜ್ರಿವಾಲ್ ವಿರುದ್ಧ ಈ ಹಿಂದೆ ಹೂಡಲಾಗಿದ್ದ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಅವರ ಪರ ವಕೀಲ ರಾಮ್ ಜೆಠ್ಮಾಲನಿ ಮೇ 15 ಮತ್ತು ಮೇ 17ರಂದು ಪಾಟಿ ಸವಾಲಿನ ಸಂದರ್ಭದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಪದ ಬಳಸಿದರು ಎಂದು ಜೇಟ್ಲಿ ಆರೋಪಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin