ತಮಿಳು ನಟರಾದ ಸೂರ್ಯ, ಶರತ್‍ಕುಮಾರ್, ಸತ್ಯರಾಜ್ ಬಂಧನದ ವಾರೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

Sharat-Kumar

ನೀಲಗಿರಿ (ಊಟಿ), ಮೇ 23- ಪತ್ರಕರ್ತರ ವಿರುದ್ಧ ಮಾನ ಹಾನಿ ಹೇಳಿಕೆ ನೀಡಿ ವಿಚಾರಣೆಗೆ ಗೈರು ಹಾಜರಾದ ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ, ಶರತ್‍ಕುಮಾರ್, ಸತ್ಯರಾಜ್ ಸೇರಿದಂತೆ ಎಂಟು ಮಂದಿಗೆ ನೀಲಗಿರಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.
2009ರಲ್ಲಿ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಚಿತ್ರನಟರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಮೇ 15ರಂದು ಆರೋಪಿಗಳು ಕೋರ್ಟ್‍ಗೆ ಹಾಜರಾಗಬೇಕಿತ್ತು. ಆದರೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಇವರಿಗೆ ಜಾಮೀನುರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin