ಬೆಂಗಳೂರು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Sowmya-Reddy--01

ಬೆಂಗಳೂರು, ಮೇ 23-ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಆಯ್ಕೆಯಾಗಿದ್ದಾರೆ. ಕಳೆದ ವಾರ ನಡೆದ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯಡಿ ಸೌಮ್ಯರೆಡ್ಡಿ ಒಬ್ಬರೇ ಸ್ಪರ್ಧಿಸಿದ್ದು, 1800 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.



ಕೇವಲ 20 ಮತ ಬಂದಿದ್ದರೂ ಮಹಿಳಾ ಮೀಸಲಾತಿಯಡಿ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಆದರೆ ನಿಯಮಾವಳಿ ಪ್ರಕಾರ ಚುನಾವಣೆಯಲ್ಲಿ ಅಧ್ಯಕ್ಷಗಾದಿಗೆ ಸ್ಪರ್ಧಿಸಬೇಕಿತ್ತು. ಹಾಗಾಗಿ ಅಧ್ಯಕ್ಷಗಾದಿಯ ಪ್ರಮುಖ ಆಕಾಂಕ್ಷಿಗಳಾಗಿದ್ದ ನಾಲ್ವರ ಹೆಸರಲ್ಲಿ ಇವರ ಹೆಸರೂ ಕೂಡ ಕೇಳಿಬಂದಿತ್ತು. ಇವರು ಅಧ್ಯಕ್ಷಗಾದಿ ಸ್ಪರ್ಧಾಕಾಂಕ್ಷಿಯಾಗಿರಲಿಲ್ಲ. ಕೇವಲ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮತ ಯಾಚನೆ ಮಾಡಿದ್ದರು. 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಯಾಚನೆ ಮಾಡಿದ್ದರೆ ಇವರೇ ಗೆಲ್ಲುತ್ತಿದ್ದರೇನೋ. ಆದರೆ ಉಪಾಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿಗಿರುವುದರಿಂದ ಹಿರಿಯರ ಮಾರ್ಗದರ್ಶನದಂತೆ ಯಾವುದೇ ಪೈಪೆÇೀಟಿ ನೀಡದೆ ಉಪಾಧ್ಯಕ್ಷಗಾದಿಗೆ ಆಯ್ಕೆಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin