ಬೆಟ್ಟಿಂಗ್ ದಂಧೆಕೋರರ ಕೃತ್ಯಕ್ಕೆ ಬಲಿಯಾದ ಬಾಲಕ ಶಶಾಂಕ್ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Betting-Shashank--01

ಕೆ.ಆರ್.ಪೇಟೆ, ಮೇ 23-ಬೆಟ್ಟಿಂಗ್ ದಂಧೆಕೋರರ ಕೃತ್ಯಕ್ಕೆ ಬಲಿಯಾದ ಮುಗ್ಧ ಬಾಲಕ ಶಶಾಂಕ್ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಶಶಾಂಕ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಸಂದರ್ಭದಲ್ಲಿ ಅಡ್ಡಿಯಾದಾಗ ಕೊಲೆ ಪ್ರಕರಣ ನಡೆದಿದೆ ಎಂದು ಆರೋಪಿ ದೀಕ್ಷಿತ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದು ತಿಳಿದುಬಂದಿದೆ.  ಕಳೆದ ಮೇ 15ರಂದು 9ನೆ ತರಗತಿ ಬಾಲಕ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ತನ್ನದಲ್ಲದ ತಪ್ಪಿಗೆ ಬಲಿಯಾಗಿದ್ದ. ಅಂತಿಮ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದ ದೀಕ್ಷಿತ್, ಕ್ರಿಕೆಟ್ ಬೆಟ್ಟಿಂಗ್ ಹಣ ಸಂಗ್ರಹಿಸಲು ಶಶಾಂಕ್‍ನನ್ನು ಕೊಲೆ ಮಾಡಿದ್ದ.ಬೆಟ್ಟಿಂಗ್‍ನಿಂದ 7 ಸಾವಿರ ರೂ. ಸಾಲ ಮಾಡಿಕೊಂಡಿದ್ದ ದೀಕ್ಷಿತ್ ಹೀಗಾಗಿ ಸಾಲ ತೀರಿಸಲು ಕಳ್ಳತನದ ಸ್ಕೆಚ್ ಹಾಕಿದ್ದ. ಶಶಾಂಕ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ. ಆದರೆ ಈ ವೇಳೆ ಮನೆಯಲ್ಲಿದ್ದ 13 ವರ್ಷದ ಬಾಲಕ ಶಶಾಂಕ್ ಕಳ್ಳತನಕ್ಕೆ ಅಡ್ಡಿಯಾದ. ಆ ಸಂದರ್ಭದಲ್ಲಿ ಪಾಪಿ ದೀಕ್ಷಿತ್ ಈತನನ್ನು ಕೊಲೆ ಮಾಡಿ ನಂತರ ಆತನ ಬಳಿ ಇದ್ದ ಮನೆಯ ಬೀಗದ ಕೀಲಿ ಬಳಸಿ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ.

ನಂತರ ನಿರ್ಜನ ಪ್ರದೇಶದಲ್ಲಿ ಶಶಾಂಕ್‍ನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ ಹೊಂಗೆ ಸೊಪ್ಪನ್ನು ಮುಚ್ಚಿ ತಲೆ ಮರೆಸಿಕೊಂಡಿದ್ದ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದ ದೀಕ್ಷಿತ್ ವಿಚಾರಣೆ ಸಂದರ್ಭದಲ್ಲಿ ಈ ಅಂಶಗಳನ್ನು ಬಾಯಿಬಿಟ್ಟಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin