ಭೈರಮಂಗಲ ಕೆರೆವರೆಗೂ ಶೋಧ ನಡೆಸಿದರೂ ಪತ್ತೆಯಾಗದ ಶಾಂತಕುಮಾರ್ ದೇಹ

ಈ ಸುದ್ದಿಯನ್ನು ಶೇರ್ ಮಾಡಿ

Shantakumar--01

ಬೆಂಗಳೂರು, ಮೇ 23-ರಾಜಕಾಲುವೆ ಪ್ರವಾಹದಲ್ಲಿ ಕೊಚ್ಚಿ ಹೋದ ಶಾಂತಕುಮಾರ್ ದೇಹ ಹುಡುಕಾಟದ ಕಾರ್ಯಾಚರಣೆ 25 ಕಿಲೋ ಮೀಟರ್ ದೂರದ ಭೈರಮಂಗಲ ಕೆರೆ ತಲುಪಿದರೂ ದೇಹ ಮಾತ್ರ ಪತ್ತೆಯಾಗಿಲ್ಲ.  ಕಳೆದ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆ ಸಂದರ್ಭದಲ್ಲಿ ಕುರುಬರಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಶಾಂತಕುಮಾರ್‍ಗಾಗಿ ಅಂದಿನಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.  ನಿನ್ನೆ ಕೆಂಗೇರಿ, ಜ್ಞಾನಭಾರತಿ ಮತ್ತಿತರ ರಾಜಕಾಲುವೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 20 ಸದಸ್ಯರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದ 20, ಅಗ್ನಿಶಾಮಕದಳದ 50 ಹಾಗೂ 300ಕ್ಕೂ ಹೆಚ್ಚು ಬಿಬಿಎಂಪಿ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.ನಿನ್ನೆ ಮತ್ತೆ ಮಳೆಯಾದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಇಂದು ಮುಂಜಾನೆ ಮತ್ತೆ ಕಾರ್ಯಾಚರಣೆ ನಡೆಸಲಾಯಿತು.
ಕುರುಬರಹಳ್ಳಿಯಿಂದ 16 ಕಿಲೋ ಮೀಟರ್ ದೂರದಲ್ಲಿರುವ ಪರಸನಪಾಳ್ಯದ ರಾಜಕಾಲುವೆಯಲ್ಲಿ ಮುಳುಗು ತಜ್ಞರು ಮತ್ತು ದೋಣಿಗಳಲ್ಲಿ ಹುಡುಕಾಟ ನಡೆಸಲಾಯಿತು. ಆದರೆ ಅಲ್ಲೂ ಶಾಂತಕುಮಾರ್ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಲಾಯಿತು.

Shantakumar-Rain

ಸ್ಥಳೀಯರು ನೀಡಿದ ಸುಳಿವು:

ಪರಸನಪಾಳ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಕೆಲವು ಸ್ಥಳೀಯರು ಭೈರಸಂದ್ರದ ಕೆರೆ ಸಮೀಪ ದೇಹವೊಂದು ಕೊಚ್ಚಿಕೊಂಡು ಹೋಗುತ್ತಿದ್ದನ್ನು ನೋಡಿದ್ದೇವೆ ಎಂದು ನೀಡಿದ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆಯನ್ನು 25 ಕಿಲೋ ಮೀಟರ್ ದೂರದ ಭೈರಮಂಗಲ ಕೆರೆವರೆಗೂ ವಿಸ್ತರಿಸಲಾಯಿತು.

214f9b4f-bef3-4875-bd55-a27ad7c04365

ಮೇಯರ್ ದೌಡು:

ನಾಲ್ಕು ದಿನ ಕಳೆದರೂ ಶಾಂತಕುಮಾರ್ ದೇಹ ಪತ್ತೆಯಾಗದಿರುವುದನ್ನು ಮನಗಂಡ ಮೇಯರ್ ಜಿ.ಪದ್ಮಾವತಿ ಇಂದು ಶೋಧ ಕಾರ್ಯಾಚರಣೆ ಸ್ಥಳಕ್ಕೆ ದೌಡಾಯಿಸಿದರು. ಸ್ವತಃ ಶೋಧ ಕಾರ್ಯಾಚರಣೆಯಲ್ಲೂ ತೊಡಗಿಸಿಕೊಂಡ ಮೇಯರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ದಿನಗಳಿಂದಲೂ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ದೇಹ ಪತ್ತೆಯಾಗುವ ಆಶಾ ಭಾವನೆ ಹೊಂದಿದ್ದೇವೆ ಎಂದರು.  25 ಕಿಲೋ ಮೀಟರ್ ದೂರದ ಭೈರಮಂಗಲ ಕೆರೆ ವರೆಗೂ ಶೋಧ ಕಾರ್ಯ ನಡೆಸಿದ್ದೇವೆ. ಇಲ್ಲೂ ದೇಹ ದೊರೆಯದಿದ್ದರೆ ಮುಂದೆ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

4f846137-9916-40ac-aa1a-74f583fbbcac

Facebook Comments

Sri Raghav

Admin