ಮದುಮಗಳನ್ನು ಕರೆದೊಯ್ಯುತ್ತಿದ್ದ ಕಾರಿಗೆ ಲಾರಿ ಡಿಕ್ಕಿ , ವಧು ಸೇರಿ 5 ಮಂದಿ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident

ಕಲ್ಬುರ್ಗಿ, ಮೇ 23- ಮದು ಮಗಳನ್ನು ಕರೆದೊಯ್ಯುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದೇವರ್ಗಿ ತಾಲ್ಲೂಕಿನ ವಂದೇವಾಳ ಬಳಿ ನಡೆದಿದೆ.  ಘಟನೆಯಲ್ಲಿ ಮದು ಮಗಳು ಜ್ಯೋತಿ (24) , ಭೂಮಿಕಾ (5), ಷಣ್ಮುಖ್ (35), ಅಮೋಘ್ (25) , ಓಂಕಾರ್ (8), ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಗುಲ್ಬರ್ಗದ ಸಿಂದಗಿ ತಾಲ್ಲೂಕಿನ ಮೊರಟಗಿ ಗ್ರಾಮಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಮೂಲಗಳ ಪ್ರಕಾರ ವೇಗವಾಗಿ ಬರುತ್ತಿದ್ದ ಕಾರು ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ತನಿಖೆಯಿಂದ ನಿಖರವಾದ ಮಾಹಿತಿ ತಿಳಿಯಬೇಕಿದೆ. ಮದುವೆಯ ಮೆಹಂದಿ ಮಾಸುವ ಮುನ್ನವೇ ನವ ವಧು ಮೃತಪಟ್ಟಿರುವುದು ಕುಟುಂಬ ಸದಸ್ಯರಲ್ಲಿ ಆಘಾತ ಮೂಡಿಸಿದೆ. ಮದುವೆಗೆ ಬಂದಿದ್ದ ನೂರಾರು ಮಂದಿ ಅಪಘಾತದ ಮಾಹಿತಿ ತಿಳಿದು ಕಣ್ಣೀರು ಹಾಕಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin