8,000 ಕೋಟಿ ರೂ.ಅವ್ಯವಹಾರ : ಲೆಕ್ಕಪರಿಶೋಧಕ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Rajesh-Agarwal
ನವದೆಹಲಿ, ಮೇ 23-ಸುಮಾರು 8,000 ಕೋಟಿ ರೂ.ಗಳ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಲೆಕ್ಕಪರಿಶೋಧಕನೊಬ್ಬನನ್ನು ಬಂಧಿಸಿದ್ದಾರೆ.   ಹಣ ಅವ್ಯವಹಾರ ಮತ್ತು ದುರ್ಬಳಕೆ ಕಾಯ್ದೆ (ಪಿಎಂಎಲ್‍ಎ) ಅಡಿ ಚಾರ್ಟರ್ಡ್ ಅಕೌಂಟೆಂಟ್ ರಾಜೇಶ್ ಅಗರ್‍ವಾಲ್‍ನನ್ನು ಬಂಧಿಸಿ ಕೋರ್ಟ್‍ಗೆ ಒಪ್ಪಿಸಲಾಗಿದೆ.   ತಮ್ಮ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲು ಅನೇಕ ಅತ್ಯಂತ ಪ್ರಭಾವಿ ವ್ಯಕ್ತಿಗಳಿಗೆ ನೆರವು ನೀಡುವಲ್ಲಿ ಅಗರ್‍ವಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.   ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳ (ಆರ್‍ಜೆಡಿ) ಪರಮೋಚ್ಚ ನಾಯಕ ಲಾಲು ಪ್ರಸಾದ ಯಾದವ್ ಶಾಮೀಲಾಗಿದ್ದಾರೆ ಎನ್ನಲಾದ 1,000 ಕೋಟಿ ರೂ. ಮೌಲ್ಯ ಬೇನಾಮಿ ಭೂ ಅವ್ಯವಹಾರ ಹಾಗೂ ತೆರಿಗೆ ವಂಚನೆ ಪ್ರಕರಣದಲ್ಲೂ ಇವರು ಶಾಮೀಲಾಗಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin