ಪಾಕ್ ಗೆ ಪಾಠ ಕಲಿಸಲು ಭಾರತ ಸಜ್ಜಾಗಿದೆ : ಅಮೆರಿಕ ರಕ್ಷಣಾ ಬೇಹುಗಾರಿಕೆ ಮುಖ್ಯಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

America--01

ವಾಷಿಂಗ್ಟನ್, ಮೇ 24– ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡುತ್ತಿರುವ ಭಾರತವು, ಈಗ ಇಸ್ಲಾಮಾಬಾದ್ ವಿರುದ್ಧ ಅತ್ಯುಗ್ರ ಮತ್ತು ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ ಎಂದು ಅಮೆರಿಕದ ಅತ್ಯುನ್ನತ ರಕ್ಷಣಾ ಬೇಹುಗಾರಿಕೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.  ಭಾರತವು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮಣಿಸುವ ತನ್ನ ಪ್ರಯತ್ನವನ್ನು ಮುಂದುವರಿಸಿದೆ ಹಾಗೂ ಭಯೋತ್ಪಾದನೆ, ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಪಾಕ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದಿರುವ ಸೇನಾ ದಾಳಿಗಳೇ ಸಾಕ್ಷಿ ಎಂದು ರಕ್ಷಣಾ ಗುಪ್ತಚರ ಸಂಸ್ಥೆ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನ್ಸೆಂಟ್ ಸ್ಟೆವಾರ್ಟ್ ಹೇಳಿದ್ದಾರೆ.



ವಿಶ್ವಾದ್ಯಂತ ತಲೆದೋರಿರುವ ಭಯೋತ್ಪಾದನೆ ಆತಂಕದ ವಿದ್ಯಮಾನಗಳ ಕುರಿತ ಕಾಂಗ್ರೆಸ್ ಮಂಡಳಿ ಚರ್ಚೆ ವೇಳೆ ಪ್ರಬಲ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರೊಂದಿಗೆ ಮಾತನಾಡಿದ ಅವರು ಭಾರತ ಮುಂದೆಯೂ ಇದೇ ರೀತಿಯ ದಂಡನಾತ್ಮಕ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.   ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಭಾರತೀಯ ಸೇನಾ ಪಡೆಗಳು ದಾಳಿ ನಡೆಸಿ ಪಾಕಿಸ್ತಾನದ ಯೋಧರ ಬಂಕರ್‍ಗಳನ್ನು ಧ್ವಂಸಗೊಳಿಸಿದ ಸಂದರ್ಭದಲ್ಲೇ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin