ಬ್ಯಾನರ್ ತೆಗೆಯುವ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಕೊಂದಿದ್ದ 6 ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

6-Arrested--01

ಬೆಂಗಳೂರು, ಮೇ 24– ಸಂಘಟನೆಯೊಂದರ ಬ್ಯಾನರ್ ತೆಗೆಯುವ ವಿಚಾರಕ್ಕೆ ಜಗಳ ತೆಗೆದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಈಶಾನ್ಯ ವಿಭಾಗ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಲಹಂಕದ ಸೈಯದ್ ಷರೀಫ್ ಅಲಿಯಾಸ್ ಶಬ್ಬು, ಸೈಯ್ಯದ್ ಮೆಹಬೂಬ್ ಪಾಷ(29), ಶಾರುಖ್‍ಖಾನ್ ಅಲಿಯಾಸ್ ಶಾರೂನ್ (24), ಸೈಯ್ಯದ್ ಮನ್ಸೂರ್ ಅಲಿ ಅಲಿಯಾಸ್ ಮನ್ಸೂರ್(30), ವಕಾರ್ ಅಹಮ್ಮದ್, ಗಂಗಾನಗರದ ಮೊಹಮ್ಮದ್ ಜಾಫರ್ ಹುಸೇನ್ ಅಲಿಯಾಸ್ ಜಾಫರ್(34), ಡಿ.ಜೆ.ಹಳ್ಳಿಯ ನವಾಜ್ ಶರೀಫ್ ಬಂಧಿತ ಆರೋಪಿಗಳು.



ಮೇ 20 ರಂದು ಆಯೂಬ್ ಖಾನ್ ಎಂಬುವರ ಕೊಲೆಯಾಗಿತ್ತು. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಸಿಮೆಂಟ್ ಕಾಂಕ್ರೀಟ್ ಫ್ಯಾಕ್ಟರಿ ಹಿಂಭಾಗ ಬೆಳ್ಳಳ್ಳಿ ಸರ್ವೆ ನಂ.55 ರಲ್ಲಿ ಸಂಘಟನೆಯೊಂದರ ಬ್ಯಾನರ್ ತೆಗೆಸುವ ವಿಚಾರವಾಗಿ ಗೋವಿಂದಪುರದ ಆಯೂಬ್ ಖಾನ್ ಮತ್ತು ಆರೋಪಿಗಳ ನಡುವೆ
ಜಗಳ ಉಂಟಾಗಿತ್ತು. ನಂತರ ಆಯೂಬ್ ಖಾನ್‍ನನ್ನು ಲಾಂಗ್ ಹಾಗೂ ಮಚ್ಚುಗಳಿಂದ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಆಯೂಬ್ ಖಾನ್ ತಂದೆ ಮೆಹಬೂಬ್ ಖಾನ್ ಈ ಸಂಬಂಧ ದೂರು ನೀಡಿದ್ದರು.

ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರ ಮಾರ್ಗದರ್ಶನದಲ್ಲಿ ಸಂಪಿಗೆಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಬೋಪಯ್ಯ ನೇತೃತ್ವದಲ್ಲಿ ಕೊತ್ತನೂರು ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಚ್.ಹರಿಯಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಹೋಂಡಾ ಸಿಟಿ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin